ಮುಸ್ಲಿಮರ ಪ್ರವಾದಿ ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮ ಅವರು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಕತಾರ್, ಕುವೈತ್ ಮತ್ತು ಇರಾನ್ ಆಡಳಿತಗಳು ಅಲ್ಲಿನ ಭಾರತೀಯ ರಾಯಭಾರಿಗಳನ್ನು ಕರೆಸಿ ತಮ್ಮ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದು, ಇದರ ಬೆನ್ನಿಗೇ ಗಲ್ಫ್ ಸಹಕಾರ ಮಂಡಳಿ ಕೂಡ ನೂಪುರ್ ಶರ್ಮ ಹೇಳಿಕೆಯನ್ನು ಖಂಡಿಸಿದೆ. ಈ ಘಟನೆಯ ನಂತರ ನೂಪುರ್ ಹೇಳಿಕೆ ಭಾರತದ ನಿಲುವಿಗೆ ವಿರುದ್ಧವಾಗಿದೆ, ಭಾರತದ ಧೋರಣೆಯು ಎಲ್ಲಾ ಧರ್ಮಗಳನ್ನು ಗೌರವಿಸುವ ದೇಶ ಎಂದು ಭಾರತ ಸ್ಪಷ್ಟಪಡಿಸಿದೆ.
ಬಿಜೆಪಿ ನಾಯಕ ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ದೇಶಗಳ ಮುಂದೆ ಭಾರತವು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದು, ನೂಪುರ್ ಹೇಳಿಕೆ ಭಾರತದ ನಿಲುವಿಗೆ ವಿರುದ್ಧವಾಗಿದೆ, ಭಾರತದ ಧೋರಣೆಯು ಎಲ್ಲಾ ಧರ್ಮಗಳನ್ನು ಗೌರವಿಸುವ ದೇಶ ಎಂದು ಸ್ಪಷ್ಟಪಡಿಸಿದೆ.
ವ್ಯಕ್ತಿಗಳು ನೀಡುವ ಪ್ರಚೋದನಕಾರಿ ಹೇಳಿಕೆಗಳನ್ನು ದೇಶದ ನಿಲುವು ಎಂದು ನೋಡಬಾರದು. ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವಂತಹ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮಗಳನ್ನು ಮುಂದುವರಿಸುವುದಾಗಿ ಭಾರತ ಹೇಳಿದೆ.
ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಗಳ ನಂತರ ಬಿಜೆಪಿಯ ವಕ್ತಾರರ ಮೇಲೆ ಪಕ್ಷವು ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿದೆ. ಪಕ್ಷದ ನಿಲುವು ಮೀರಿ ವಿವರಣೆ ನೀಡದಂತೆ ನಾಯಕರಿಗೆ ಸೂಚಿಸಲಾಗಿದೆ.
ವಕ್ತಾರರು ಮಿತವಾಗಿರಬೇಕು ಮತ್ತು ಸಭ್ಯವಾಗಿ ವರ್ತಿಸಬೇಕು ಎಂದು ಬಿಜೆಪಿ ನಾಯಕತ್ವ ಹೇಳಿದೆ. ಪಕ್ಷ ಸೂಚಿಸಿದ ವಿಷಯಕ್ಕೆ ಮಾತ್ರ ಮಧ್ಯಸ್ಥಿಕೆ ವಹಿಸುವುದು ಅಥವಾ ಪ್ರತಿಕ್ರಿಯಿಸುವುದು ಸಾಕು. ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ವಕ್ತಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ನಾಯಕತ್ವ ಹೇಳಿದೆ.
ಆರು ಮುಸ್ಲಿಮ್ ಸದಸ್ಯ ರಾಷ್ಟ್ರಗಳಾದ ಕುವೈತ್, ಒಮಾನ್, ಬಹರೈನ್, ಯುಎಇ, ಕತರ್ ಮತ್ತು ಸೌದಿ ಅರೇಬಿಯಾ ಪರವಾಗಿ ಗಲ್ಫ್ ಸಹಕಾರ ಮಂಡಳಿ ಹೇಳಿಕೆ ನೀಡಿದ್ದು, ಭಾರತದ ಬಿಜೆಪಿ ವಕ್ತಾರೆ ನೀಡಿದ ಹೇಳಿಕೆಯನ್ನು ಖಂಡಿಸುತ್ತೇವೆ ಹಾಗೂ ತಿರಸ್ಕರಿಸುತ್ತದೆ ಎಂದು ತಿಳಿಸಿದೆ. ಈ ಹೇಳಿಕೆ ನೀಡಿದ ನೂಪುರ್ ಶರ್ಮಳನ್ನು ಬಿಜೆಪಿ ಉಚ್ಛಾಟನೆಗೊಳಿಸಿದೆ.