ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಮಾ. 25 ಬೆಳಗ್ಗೆ 9 ರಿಂದ ಮಾ. 26 ರವರೆಗೆ ನಡೆದ ತಪಾಸಣೆಯಲ್ಲಿ ಅಕ್ರಮ ಹಣ ಹಾಗೂ ಮದ್ಯ ವಶಪಡಿಸಿಕೊಳ್ಳಲಾಗಿದೆ. ಒಟ್ಟು 1,39,300 ರೂ. ಹಣ ಹಾಗೂ 46 ಲೀ. ಮದ್ಯ ವಶಕ್ಕೆ ಪಡೆಯಲಾಗಿದೆ.
ಇದರೊಂದಿಗೆ ಮಾ. 17 ರಿಂದ 26 ರ ವರೆಗೆ ಒಟ್ಟು 8,71,500 ರೂ. ನಗದನ್ನು ವಶಪಡಿಸಿಕೊಂಡಿದಾಗಿದೆ. ಇದರ ಜೊತೆಗೆ 5,72,342 ರೂ, ಮೌಲ್ಯದ ಒಟ್ಟು 1078,98 ಲೀ. ಮದ್ಯವನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ.ಈ ಪೈಕಿ ತಪಾಸಣೆ ನಡೆದ ನಂತರ ಇದರ ಬಗ್ಗೆ ಸಂಪೂರ್ಣವಾಗಿ ದಾಖಲೆಯನ್ನು ಪರಿಶೀಲಿಸಿ 1.32 ಲಕ್ಷ ರೂ. ಗಳನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ವಾಪಾಸ್ ನೀಡಲಾಗಿದೆ.