ಉಡುಪಿ : ಭಟ್ಕಳ ತಾಲೂಕಿನ ಚಂದ್ರಕಾಂತ ಖಾರ್ವಿ ಶಿಕ್ಷೆಗೆ ಒಳಗಾದವ. ಈತ ಪ್ರಕಾಶ್ ಪೂಜಾರಿ ಅವರನ್ನು ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಕೆಯಲ್ಲಿ ಬೋಟು ಕಟ್ಟುವ ವಿಚಾರದಲ್ಲಿ ವೈಮನಸ್ಸಿನಿಂದ 2017ರಲ್ಲಿ ಕೊಲೆ ಮಾಡಿದ್ದ. ಸಣ್ಣ ವಿಚಾರದಲ್ಲಿ ಮಾತಿನ ಚಕಮಕಿ ನಡೆದು, ಪ್ರಕಾಶ್ ಪೂಜಾರಿಗೆ ಆರೋಪಿ. ಚಂದ್ರಕಾಂತನು ಮರದ ಹಲಗೆಯಿಂದ ತಲೆಗೆ ಹೊಡೆದಾಗ ಗಾಯಗೊಂಡ ಪ್ರಕಾಶ ಪೂಜಾರಿ ಪಂಚಗಂಗಾವಳಿ ಹೊಳೆಗೆ ಬಿದ್ದಿದ್ದ. ಆ ಬಳಿಕ ಮೃತದೇಹ. ಗಂಗೊಳ್ಳಿ ಗ್ರಾಮದ ಬೇಲಿಕೆರೆ ಅರಬಿ ಸಮುದ್ರದಲ್ಲಿ ಪತ್ತೆಯಾಗಿತ್ತು.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಹೆಚ್ಚುವರಿ ಜಲ್ಲಾ ಮತ್ತು ಸತ್ತ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ತೀರ್ಪು ನೀಡಿ, ಆಪಾದಿತನಿಗೆ 12 ವರ್ಷಸಜೆ, 15,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸಾಕ್ಷಿ ವಿಚಾರಣೆಯನ್ನು ಸರಕಾರಿ ಅಭಿಯೋಜಕರಾದ ಬಿ. ಪ್ರಕಾಶ್ಚಂದ್ರ ಶೆಟ್ಟ, ಹರಿಶ್ಚಂದ್ರ ಊದಿಯಾವರ್ ನಡೆಸಿ, ಈಗಿನ ಸರಕಾರಿ ಅಭಿಯೋಜಕಿ ಇಂದಿರಾ. ನಾಯ್ಕ ವಿಚಾರಣೆ ಮುಂದುವರಿಸಿದ್ದರು. ಅಂದಿನ ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಆರ್. ಗುಐಗ ತನಿಖೆ ನಡೆಸಿ ದೋಷಾರೋಪಣಾ ಪಟ್ಟ. ಸಲ್ಲಿಸಿದರು.