Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ನಾಲ್ವರು ರೌಡಿಗಳ ಮೇಲೆ ಗೂಂಡಾಕಾಯ್ದೆ- 13 ಮಂದಿ ಗಡಿಪಾರು
    ಇತ್ತೀಚಿನ ಸುದ್ದಿ

    ಮಂಗಳೂರು: ನಾಲ್ವರು ರೌಡಿಗಳ ಮೇಲೆ ಗೂಂಡಾಕಾಯ್ದೆ- 13 ಮಂದಿ ಗಡಿಪಾರು

    March 27, 2024
    Share

    ಮಂಗಳೂರು: ಲೋಕಸಭೆ ಚುನಾವಣೆ ಶಾಂತಿಯುತವಾಗಿ ನಡೆಯುವ ಹಿನ್ನಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮತ್ತೆ ನಾಲ್ವರು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ.

    ಅಲ್ಲದೆ, ಮತ್ತೆ 13 ಮಂದಿಯನ್ನು ದ.ಕ.ಜಿಲ್ಲೆಯಿಂದ ಗಡೀಪಾರು ಮಾಡಲಾಗಿದೆ. ಉಳ್ಳಾಲ ಅಂಬ್ಲಮೊಗರು ನಿವಾಸಿ ಹೇಮಚಂದ್ರ ಅಲಿಯಾಸ್ ಪ್ರಜ್ವಲ್ ಪೂಜಾರಿ(29), ಉಳ್ಳಾಲ ಕೈರಂಗಳ ನಿವಾಸಿ ನವಾಜ್ (36), ಕುದ್ರೋಳಿ ನಿವಾಸಿ ಅನೀಸ್ ಅಶ್ರಫ್ (26), ಬೋಳೂರು ನಿವಾಸಿ ಚರಣ್ ಶೇಟ್ (39) ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ. ಹೇಮಚಂದ್ರನ ವಿರುದ್ಧ ಕೊಲೆ ಯತ್ನ, ಕೊಲೆ, ಗಲಭೆ, ಕಿಡ್ನಾಪ್ ಸೇರಿದಂತೆ ಒಟ್ಟು 17 ಕೇಸುಗಳಿವೆ. ಅನೀಸ್ ಅಶ್ರಫ್ ವಿರುದ್ಧ ಕೊಲೆ ಯತ್ನ, ಡ್ರಗ್ಸ್, ಗಲಭೆ, ಕಳವು, ಹಲ್ಲೆ ಸೇರಿದಂತೆ 18 ಕೇಸುಗಳಿದೆ. ನವಾಜ್ ವಿರುದ್ಧ ಹಲ್ಲೆ, ಕೊಲೆಯತ್ನ, ಕಿಡ್ನಾಪ್ ಪ್ರಕರಣ ಸೇರಿ 13 ಕೇಸುಗಳಿವೆ. ಚರಣ್ ವಿರುದ್ಧ ಹಲ್ಲೆ, ಗಲಭೆ, ಕೊಲೆ ಯತ್ನ ಎರಡು ಕೊಲೆ, ಕಿಡ್ನಾಪ್, ರಾಬರಿ ಸೇರಿದಂತೆ 11 ಕೇಸುಗಳಿದೆ. ಅಲ್ಲದೆ ಅಪರಾಧ ಹಿನ್ನೆಲೆಯಿರುವ ಮತ್ತೆ 13 ಮಂದಿಯನ್ನು ಜಿಲ್ಲೆಯಿಂದ ಬೇರೆಡೆಗೆ ಗಡೀಪಾರು ಮಾಡಲು ಪೊಲೀಸ್ ಕಮಿಷನ‌ರ್ ಆದೇಶಿಸಿದ್ದಾರೆ. ಬೋಳಾರ ನಿವಾಸಿ ಜ್ಞಾನೇಶ್ ನಾಯಕ್(25), ಕುದ್ರೋಳಿ ನಿವಾಸಿ ಫಹಾದ್(25), ಉಳ್ಳಾಲ ಮೊಗವೀರಪಟ್ನ ನಿವಾಸಿ ಧನುಷ್ (30), ಕಾವೂರು ಶಾಂತಿನಗರದ ಮೊಹಮ್ಮದ್ ಸಾಹೇಬ್(28), ಮೂಡುಶೆಡ್ಡೆ ನಿವಾಸಿ ದೀಪಕ್ ಪೂಜಾರಿ(38), ಕೃಷ್ಣಾಪುರದ ಶಾಹಿಲ್ ಇಸ್ಮಾಯಿಲ್(27), ಉಳ್ಳಾಲ ಬಸ್ತಿಪಡು ನಿವಾಸಿ ಮಹಮ್ಮದ್ ಶಕೀರ್(30), ಉಳ್ಳಾಲ ಮೇಲಂಗಡಿಯ ಇಬ್ರಾಹಿಂ ಖಲೀಲ್ (22), ಕುದ್ರೋಳಿ ಧನುಷ್ (28), ಬಜಾಲಿನ ನೌಫಾಲ್ (35), ಮರೋಳಿಯ ಹವಿತ್ ಪೂಜಾರಿ(28), ಫರಂಗಿಪೇಟೆಯ ಕೌಶಿಕ್ ನಿಹಾಲ್ (24), ಬೆಳುವಾಯಿ ನಿವಾಸಿ ಸಂತೋಷ್ ಶೆಟ್ಟಿ (34) ವಿರುದ್ಧ ಗಡೀಪಾರು ಆದೇಶ ಮಾಡಲಾಗಿದೆ. ಈ ಹಿಂದೆ 48 ಮಂದಿಯ ವಿರುದ್ಧ ಗಡೀಪಾರು ಆದೇಶ ಮಾಡಲಾಗಿತ್ತು.

    Post Views: 184

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.