ಪುತ್ತೂರು : ಪುತ್ತೂರಿನ ಜಿಡೆಕಲ್ಲಿನಲ್ಲಿ ವ್ಯಸನಿಯೊಬ್ಬ 200ಕ್ಕೂ ಹೆಚ್ಚು ಮನೆಗಳಿಗೆ ಹೋಗುವ ಕುಡಿಯುವ ನೀರಿನ ಪೈಪ್ ಕಟ್ ಮಾಡಿರುವ ಘಟನೆ ನಡೆದಿದೆ.
ಫೆ.2 ರಂದು ಪುತ್ತೂರು ನಗರಸಭಾ ವ್ಯಾಪ್ತಿಯ ಜಿಡೆಕಲ್ಲು ಎಂಬಲ್ಲಿ ಘಟನೆ ನಡೆದಿದ್ದು, ಯೋಗಿಶ ಪೂಜಾರಿ ಎಂಬಾತ ನೀರಿನ ಪೈಪ್ ತುಂಡರಿಸಿ ಹುಚ್ಚಾಟ ಮೆರೆದ ಯುವಕ.
ಜಿಡೆಕಲ್ಲು ಶಾಲಾ ಸಮೀಪವಿರುವ ನೀರಿನ ಟ್ಯಾಂಕ್ ನಿಂದ ಸಂಪರ್ಕವಿರುವ ಎಲ್ಲಾ ಪೈಪ್ ಗಳನ್ನು ತುಂಡರಿಸಿದ್ದಾನೆ.
ಈತ ಕಳೆದ 3-4 ದಿನಗಳಿಂದ ರಸ್ತೆಯಲ್ಲಿ ಸಿಕ್ಕಿದವರಿಗೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ ಎಂದು ಊರಿನವರು ಆಪಾದಿಸಿದ್ದಾರೆ.
ಪೈಪ್ ಲೈನ್ ತುಂಡರಿಸುತಿದ್ದಾಗ ಊರಿನವರ ಕೈಗೆ ಸಿಕ್ಕಿ ಬಿದ್ದಿದ್ದ, ನಂತರ ತಪ್ಪಿಸಿಕೊಂಡು ಬೆಂಗಳೂರಿಗೆ ಹೋಗಿ ಇಂದು ರೈಲಿನಲ್ಲಿ ವಾಪಾಸ್ ಬಂದಾಗ ಊರಿನವರ ಕೈಗೆ ಸಿಕ್ಕಿಬಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.