Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»Uncategorized»ಉಪ್ಪಿನಂಗಡಿಯ ಯುವಕನನ್ನು 3 ತಿಂಗಳ ಕಾಲ ಅಕ್ರಮವಾಗಿ ಕೂಡಿಟ್ಟು ಹಲ್ಲೆ, ಮೂವರ ಬಂಧನ
    Uncategorized

    ಉಪ್ಪಿನಂಗಡಿಯ ಯುವಕನನ್ನು 3 ತಿಂಗಳ ಕಾಲ ಅಕ್ರಮವಾಗಿ ಕೂಡಿಟ್ಟು ಹಲ್ಲೆ, ಮೂವರ ಬಂಧನ

    October 9, 2025
    Share

    ಪುತ್ತೂರು :  ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯ ಯುವಕನೋರ್ವನನ್ನು ಬೆಂಗಳೂರಿನಲ್ಲಿ 3 ತಿಂಗಳ ಕಾಲ ಅಕ್ರಮವಾಗಿ ಕೂಡಿ ಹಾಕಿ ಹಲ್ಲೆಗೈದ ಘಟನೆ ನಡೆದಿದೆ.

    ಈ ಬಗ್ಗೆ ಬೆಂಗಳೂರಿನ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಅಪಹರಣಕ್ಕೊಳಗಾದ ಸಫಾ ನಗರ ಮಠ ನಿವಾಸಿ  ಮೊಹಮ್ಮದ್ ಮುಸ್ತಫಾ ಎಂಬವರು ನೀಡಿದ ದೂರಿನನ್ವಯ ಬಿಎನ್‌ಎಸ್ ಸೆಕ್ಷನ್ 118(1), 127(4), 140(2), 351(2),352,3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ದೇವನಹಳ್ಳಿ ಠಾಣಾ ಪೊಲೀಸರು, ಅಜಯ್, ಕಾರ್ತಿಕ್, ಜೀವನ್ ಎಂಬ ಮೂವರನ್ನು ಬಂಧಿಸಿದ್ದಾರೆ. ಪ್ರಕರಣದ ನಾಲ್ಕನೇ ಆರೋಪಿ ಲಕ್ಷಣ್  ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.

    ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಚೀಫ್ ಫೈನಾಸ್ಸಿಂಗ್ ಆಫೀಸರ್ ಆಗಿ  ಸಂತ್ರಸ್ಥ ಯುವಕ ಕೆಲಸಕ್ಕಿದ್ದು ಸ್ನೇಹಿತ ಮೊಹಮ್ಮದ್ ರಾಜೀ ಎಂಬಾತನ ಜೊತೆ ಇಂದಿರಾನಗರದ ಬಳಿಯಿರುವ ಲಾಡ್ಜೊಂದರಲಿ ವಾಸವಾಗಿದ್ದ. ಅಲ್ಲಿಗೆ ಬಂದ ಕಾರ್ತಿಕ್ ಎಂಬವರು ಮೊಹಮ್ಮದ್ ರಾಜೀ ಜೊತೆ ಮಾತುಕತೆ ನಡೆಸುತ್ತಿದ್ದ. ಆ ದಿನ ಮೊಹಮ್ಮದ್ ರಾಜೀಯು ತನಗೇನೋ ಕೆಲಸವಿದೆಯೆಂದು ಕಾರ್ತಿಕ್ ಜೊತೆ ಹೇಳಿ ಹೊರಟು ಹೋಗಿದ್ದ. ಮರುದಿನವಾದರೂ ಮೊಹಮ್ಮದ್ ರಾಜೀ ಬಂದಿರಲಿಲ್ಲ. ಮರುದಿನ ಅವ ಯಾಕೆ ಬರಲಿಲ್ಲವೆಂದು ವಿಚಾರಿಸಲು ಬಂದ ಕಾರ್ತಿಕ್ ಮತ್ತು ಲಕ್ಷ್ಮಣ್ ನೀನು ನನ್ನ ಜೊತೆ ಬಾ ಎಂದು ಸಂತ್ರಸ್ಥನನ್ನು ಕರೆದೊಯ್ದಿದ್ದ. ಅಲ್ಲಿಂದ ಕಾರಿನಲ್ಲಿ ದೇವನಹಳ್ಳಿಗೆ ಸಂತ್ರಸ್ಥ ಯುವಕನನ್ನು ಕರೆದುಕೊಂಡು ಬಂದಿದ್ದು, ಅಲ್ಲಿ ಫೈನಾನ್ಸ್‌ವೊಂದರಲ್ಲಿ  ಕೂಡಿ ಹಾಕಿದ್ದರು. ಅಲ್ಲಿಗೆ ಅಜಯ್ ಎಂಬಾತ ಬಂದು “ನಿನ್ನ ಗೆಳೆಯ ಮೊಹಮ್ಮದ್ ರಾಜೀ ಎಂಬಾತ ನನ್ನಿಂದ ಆರು ಲಕ್ಷವನ್ನು ಸಾಲ ಪಡೆದಿದ್ದಾನೆ. ಅದನ್ನು ಹಿಂದುರಿಗಿಸದೇ ನಿನ್ನನ್ನು ಬಿಡುವುದಿಲ್ಲ ಎಂದು ದೈಹಿಕವಾಗಿ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡುತ್ತಿದ್ದನು ಎಂದು ಸಂತ್ರಸ್ಥ ದೂರಿನಲ್ಲಿ ತಿಳಿಸಿದ್ದಾನೆ. ಕೊಠಡಿಯಲ್ಲಿ ಕೂಡಿ ಹಾಕಿ ದಿನ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದರು. ಇದರಲ್ಲಿ ಇವರೊಂದಿಗೆ ಜೀವನ್ ಎಂಬಾತನೂ ಸೇರಿಕೊಂಡಿದ್ದಾನೆ. ಅ.5ರಂದು ರಾತ್ರಿ 8 ಗಂಟೆಗೆ ಸಂತ್ರಸ್ಥ ಯುವಕನಿಗೆ ಡೆಡ್‌ಲೈನ್ ನೀಡಿ ದುಡ್ಡು ಬಂದಿಲ್ಲ ಅಂದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದರು. ಬಳಿಕ ಈ ವಿಷಯ ಮನೆಯವರಿಗೆ ಗೊತ್ತಾಗಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವರ್ತರಾದ ದೇವನಹಳ್ಳಿ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಸಂತ್ರಸ್ಥ ಯುವಕನನ್ನು ರಕ್ಷಣೆ ಮಾಡಿದ್ದಾರೆ.

    Post Views: 116

    Related Posts

    ಮಂಗಳೂರು: ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೈಬರ್ ವಂಚಕರ ಜಾಲವನ್ನು ಬೇಧಿಸಿದ ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು- 6 ಮಂದಿ ಆರೋಪಿಗಳ ಬಂಧನ

    February 28, 2026

    ಪ್ರತಿಷ್ಠಿತ ಎಕ್ಸ್ ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ; 99 ಪರ್ಸೆಂಟೈಲ್ ಕ್ಕಿಂತ ಅಧಿಕ ಅಂಕ ಪಡೆದ 15 ವಿದ್ಯಾರ್ಥಿಗಳು

    February 18, 2026

    ಮಂಗಳೂರು:ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಯುವತಿ ಸಾವು , ಶವ ಮುಂದಿಟ್ಟು ಪ್ರತಿಭಟಿಸಿದವರ ವಿರುದ್ಧವೂ ಕೇಸ್- ಕಮಿಷನರ್

    February 6, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.