ಮಂಗಳೂರು: ಮಂಗಳೂರಿನ ಪಣಂಬೂರಿನಲ್ಲಿ ಮೂರು ವರ್ಷ ಪ್ರಾಯದ ಮಗುವಿನ ಮೇಲೆ 50ರ ಹರೆಯದ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.

ಉತ್ತರ ಭಾರತದ ದಂಪತಿಯ 3 ವರ್ಷ ಪ್ರಾಯದ ಮಗುವಿನ ಮೇಲೆ ಅಶೋಕ್ ಖಾರ್ವಿ (50) ಎಂಬಾತ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಎಫ್‌ಐಆರ್ ದಾಖಲಾಗಿದೆ. ಪಣಂಬೂರಿನ ಬೆಂಗ್ರೆಯಲ್ಲಿ ಘಟನೆ ನಡೆದಿದ್ದು, ಭಾನುವಾರ ದಂಪತಿ ಮನೆಯಲ್ಲಿ ಇಲ್ಲದ ವೇಳೆ ಅರೋಪಿ ಮಗುವನ್ನು ತನ್ನ ಮನೆಗೆ ಕರೆದುಕೊಂಡು ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
ದಂಪತಿ ಸಂಜೆ ಮನೆಗೆ ಹಿಂದಿರುಗಿದ ವೇಳೆ ಮಗು ಕಾಣಿಸಿಲ್ಲ. ಹುಡುಕಾಡಿದಾಗ ಪಕ್ಕದ ಅಶೋಕ್ ಖಾರ್ವಿ ಮನೆಯಲ್ಲಿ ಮಗು ಅಳುತ್ತಿರುವುದು ಕಂಡುಬಂದಿದೆ. ದಂಪತಿ ನೀಡಿದ ದೂರಿನ ಪ್ರಕಾರ ಪೊಲೀಸರು ರಕ್ತದ ಮಾದರಿಯನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಲೈಂಗಿಕ ದೌರ್ಜನ್ಯ ದೃಢಪಟ್ಟರೆ ಪೋಕ್ಸೊ ಕೇಸ್ ದಾಖಲಾಗಲಿದೆ.