ಬೆಂಗಳೂರು: 5G ಸೇವೆಯನ್ನು ದೇಶದಲ್ಲಿ ಕೆಲ ನೆಟ್‌ವರ್ಕ್‌ಗಳು ಆಯ್ದ ಪ್ರದೇಶಗಳಲ್ಲಿ ಶುರುವಾಗಿದೆ. ಈ ನಡುವೆ ಇದೇ ಅವಕಾಶವನ್ನು ಮಿಸ್ ಮಾಡಿಕೊಳ್ಳುತ್ತಿರುವ ಸೈಬರ್ ಕಿರಾತಕರು, 5G ಅಪ್‌ಡೇಟ್ ಲಿಂಕ್ ಗಳನ್ನು ಮೊಬೈಲ್ ಗ್ರಾಹಕರಿಗೆ ಕಳುಹಿಸಿ ಬ್ಯಾಂಕ್‌ಗಳಲ್ಲಿ ಇರುವ ಹಣವನ್ನು ಕದಿಯಲು ಶುರುಮಾಡಲು ಮಾಡಿದ್ದಾರೆ.
ಈ ನಡುವೆ ಈ ಬಗ್ಗೆ ರಾಜ್ಯ ಪೋಲಿಸ್ ಇಲಾಖೆ ಜನತೆಗೆ ಮಹತ್ವದ ಸಂದೇಶವನ್ನು ಕಳುಹಿಸುತ್ತಿದ್ದು, ಆ ಸಂದೇಶದಲ್ಲಿ ಎಲ್ಲ ನಾಗರಿಕರಿಗೆ ಈ ಮೂಲಕ ತಿಳಿಯಪಡಿಸುವ ವಿಷಯ ಏನೆಂದರೆ Mobile Sim Card 5G ಸರ್ವಿಸ್ ಪ್ರಾರಂಭವಾಗಿರುವುದು ನಿಮಗೆ ಗೊತ್ತಿರುವ ವಿಷಯವಾಗಿದೆ ಇದನ್ನೆ ನೇಪವಾಗಿಟ್ಟುಕೊಂಡು ಸೈಬರ್ ಕ್ರೈಮ್ ನ ಕೇಲವು ಕಿಡಿಗೇಡಿಗಳು ನಿಮ್ಮ ಮೊಬೈಲ್ ಗೆ ಕಾಲ್ ಮಾಡಿ ನಿಮ್ಮ Sim card ನ್ನು 4G ದಿಂದ 5G ಗೆ Update ಮಾಡ್ತಿವಿ ನಿಮಗೆ ಒಂದು OTP ಬರುತ್ತೆ ಹೇಳಿ ಅಂತ ಕಾಲ್ ಬಂದರೆ ಖಂಡಿತವಾಗಿ ಯಾರು ನಿಮಗೆ ಬಂದ OTP ತಿಳಿಸಬೇಡಿ ನೀವು ಒಂದು ವೇಳೆಗೆ ಅವರು ಕಳುಹಿಸಿದ OTP ಸಂಖ್ಯೆ ಅವರಿಗೆ ಹೇಳಿದರೆ ನಿಮ್ಮ Bank Account ದಲ್ಲಿರುವ ಎಲ್ಲಾ ಹಣವನ್ನು ಅವರು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ ಆದರಿಂದ ದಯವಿಟ್ಟು ಯಾರು ಅಪರಿಚಿತರು OTP ಕೇಳಿದರೆ ಹೇಳ್ಬೇಡಿ ಅಂತ ಹೇಳಿದೆ.