ಮಂಗಳೂರು: ಡೆಲ್ಲಿ ಸೈಬರ್ ಕ್ರೈಂ ಮತ್ತು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಅಪರಿಚಿತನೊಬ್ಬ ಕಾವೂರಿನ ನಿವಾಸಿಗೆ ಹಂತಹಂತವಾಗಿ 68 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ. ಅಕ್ಟೋಬರ್ 10 ರಂದು ಮಧ್ಯಾಹ್ನ 3:10 ಕ್ಕೆ, ದೂರುದಾರರಿಗೆ 1401870828 ಸಂಖ್ಯೆಯಿಂದ ಸ್ವಯಂಚಾಲಿತ ರೆಕಾರ್ಡ್ ಕರೆ ಬಂದಿದೆ. ಅತ್ತ ಕಡೆ ಮಾತನಾಡಿದ ವ್ಯಕ್ತಿಯೊಬ್ಬ “ತಮ್ಮ ಹೆಸರಿನಲ್ಲಿ ಪಾರ್ಸೆಲ್ ಇದೆ” ಎಂದು ಹೇಳಿ, ಮೊಬೈಲ್ ಕೀಪ್ಯಾಡ್‌ನಲ್ಲಿ 2 ಅಂಕಿಯ ಬಟನ್ ಒತ್ತುವಂತೆ ಸೂಚಿಸಿತು. ದೂರುದಾರರು ಬಟನ್ ಒತ್ತಿದ ಬಳಿಕ, ಕರೆ DHL ಕಸ್ಟಮರ್ ಕೇರ್‌ಗೆ ಸಂಪರ್ಕಗೊಂಡಿದೆ. ಅಲ್ಲಿ ಮಾತನಾಡಿದ ವ್ಯಕ್ತಿ ಡೆಲ್ಲಿಯಿಂದ ಕಳುಹಿಸಿದ ಪಾರ್ಸೆಲ್‌ನಲ್ಲಿ 3.1 ಕೆ.ಜಿ ಮಾದಕ ವಸ್ತು (MDMA), ಐಫೋನ್, ಮತ್ತು 3 ಕೆ.ಜಿ ಬಟ್ಟೆ ಇದ್ದು, ಕಸ್ಟಮ್ಸ್ ಅದನ್ನು ಸೀಜ್ ಮಾಡಿರುವುದಾಗಿ ತಿಳಿಸಿದ್ದಾನಸ. ತಕ್ಷಣ ಡೆಲ್ಲಿ ಸೈಬರ್ ಕ್ರೈಂ ಪೊಲೀಸರಿಗೆ ಕನೆಕ್ಟ್ ಮಾಡಲಾಗಿದೆ ಎಂದು ಹೇಳಲಾಗಿದ್ದು, ಅತ್ತ ಕಡೆ ಮತ್ತೊಬ್ಬ ಮಾತನಾಡಿ ತಾನು “ಸೆಮಾದಾನ ಪವಾರ್” ಎಂಬ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ದೂರುದಾರರ ಬ್ಯಾಂಕ್ ಖಾತೆಗಳನ್ನು ಯಾರೋ ದುರುಪಯೋಗ ಮಾಡಿದ್ದಾರೆಂದು ತಿಳಿಸಿದರು. ಈ ದುರುಪಯೋಗವನ್ನು ತಡೆಯಲು ದೂರುದಾರರು 24,68,392/- ರೂಪಾಯಿಗಳನ್ನು ಇಂಡಸ್ ಇಂಡ್ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಒತ್ತಾಯಿಸಿದರು. ದೂರುದಾರರು ಇದನ್ನು ನಂಬಿ, ಅ.14 ರಂದು, ಹೆಚ್‌ಡಿಎಫ್‌ಸಿ ಖಾತೆಯಿಂದ 24,68,392/- ಹಣವನ್ನು ಕಳುಹಿಸಿದ್ದಾರೆ. ಬಳಿಕ, ಆ ವ್ಯಕ್ತಿ ಮತ್ತೊಂದು ನೋಟಿಸ್ ಬಂದಿದ್ದು, 27,54,163/- ರೂಪಾಯಿಗಳನ್ನು ವರ್ಗಾಯಿಸುವಂತೆ ಸೂಚನೆ ನೀಡಿದರು. ಹೀಗಾಗಿ, ಅ.18 ರಂದು, ದೂರುದಾರರು ಐಸಿಐಸಿಐ ಖಾತೆಯಿಂದ ಹಣವನ್ನು ಮತ್ತೊಮ್ಮೆ ಕಳುಹಿಸಿದರು. ಬಳಿಕ ಮತ್ತಷ್ಟು ಹಣ ಕಳಿಸಬೇಕೆಂದು ಒತ್ತಾಯಿಸಿದರು. ದೂರುದಾರರು ಮತ್ತೆ 15,77,445/- ಹಣವನ್ನು ಬಾಂಧನ್ ಬ್ಯಾಂಕ್ ಖಾತೆಗೆ ವರ್ಗಾಯಿಸಿದರು. ಈ ಎಲ್ಲಾ ಹಣವನ್ನು ಕಳೆದುಕೊಂಡ ಬಳಿಕ, ದೂರುದಾರರು ಶಂಕಿಸಿ ಅವರನ್ನು ಪ್ರಶ್ನಿಸಿದಾಗ, ಆ ವ್ಯಕ್ತಿಗಳು ಗದರಿಸುತ್ತ, ಇನ್ನೂ ಹೆಚ್ಚು ಹಣದ ಒತ್ತಡ ಹಾಕಿದರು. ದೂರುದಾರರು ಅ.14 ರಿಂದ 21ರವರೆಗೆ, ಹಂತ ಹಂತವಾಗಿ ಒಟ್ಟು 68,00,000/- ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಈ ವಂಚನೆ ಬಗ್ಗೆ ದೂರುದಾರರು ಕಾವೂರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.