ಮಂಗಳೂರು: ಕತಾರ್‌ನಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಖಾತೆಯಿಂದ 2,50,325 ರೂ. ವರ್ಗಾಯಿಸಿ ವಂಚನೆಗೈದ ಬಗ್ಗೆ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ರೋಹನ್ ಶರ್ಮ ಮತ್ತು ಆಲಿ ಎಂದು ಗುರುತಿಸಲಾಗಿದೆ. ಇ-ಮೇಲ್‌ಗೆ ಕತಾರ್‌ನ ಕಂಪೆನಿಯೊಂದರಲ್ಲಿ ಇಂಜಿನಿಯರ್ ಉದ್ಯೋಗವಿದ್ದು, ಇದರ ಇಂಟರ್‌ವ್ಯೂ ಇದೆಯೆಂದು ಸಂದೇಶ ಬಂದಿತ್ತು. ಅದರಂತೆ ದೂರುದಾರರು ಅರ್ಜಿ ಸಲ್ಲಿಸಲು ನಿರ್ಧರಿಸಿ, ಆರೋಪಿಗಳು ಹೇಳಿದಂತೆ ಅಂಕಪಟ್ಟಿ, ರೆಸ್ಯೂಮ್, ಸ್ಯಾಲರಿ ಸ್ಲಿಪ್, ಪಾಸ್‌ಪೋರ್ಟ್ ಪ್ರತಿ, ಕೋವಿಡ್ ವ್ಯಾಕ್ಸಿನೇಶನ್ ಸರ್ಟಿಫಿಕೇಟ್‌ನ್ನು ಇ-ಮೇಲ್ ಮೂಲಕ ಕಳುಹಿಸಿಕೊಟ್ಟಿದ್ದರು. ಇದಾದ ಕೆಲದಿನಗಳ ಬಳಿಕ ಅವರ ಖಾತೆಯಿಂದ ಹಂತ ಹಂತವಾಗಿ 2,50,325 ಲಕ್ಷ ರೂ. ಗಳನ್ನು ವರ್ಗಾಯಿಸಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.