ಕಾಸರಗೋಡು: ಕ್ಷುಲ್ಲಕ ಕಾರಣಕ್ಕೆ ಮರದ ಹಲಗೆ ಯಿಂದ ಬಡಿದು ತಾಯಿ ಯನ್ನು ಕೊಲೆಗೈದ ಘಟನೆ ನೀಲೇಶ್ವರ ದಲ್ಲಿ ಗುರುವಾರ ಬೆಳಿಗ್ಗೆ ಘಟನೆ ನಡೆದಿದೆ.ನೀಲೇಶ್ವರ ಕಣಿಚ್ಚರದ ರುಕ್ಮಿಣಿ (63) ಕೊಲೆ ಆದವರು. ಕೃತ್ಯವೆಸಗಿದ ಪುತ್ರ ಸುಜಿತ್ (34) ನನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.ಈತನನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ. ಮೊಬೈಲ್ ಫೋನ್ ಬಳಕೆ ಬಗ್ಗೆ ಉಂಟಾದ ಮಾತಿನ ಚಕಮಕಿ ಕೊಲೆ ಯಲ್ಲಿ ಕೊನೆ ಗೊಂಡಿದೆ. ಹಲಗೆಯಿಂದ ತಲೆಗೆ ಬಡಿದ ಪರಿಣಾಮ ರುಕ್ಮಿಣಿ ಗಂಭೀರ ಗಾಯಗೊಂಡು ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಲಾಗಿ ದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತ ಪಟ್ಟಿದ್ದಾರೆ .ಪೊಲೀಸರು ಆರೋಪಿಯನ್ನು ಬಂಧಿಸಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ್ದು, ವೈದ್ಯರು ಈತನಿಗೆ ಮಾನಸಿಕ ಸಮಸ್ಯೆ ಗಳಿರು ವುದಾಗಿ ವೈದ್ಯರು ವರದಿ ನೀಡಿದ್ದಾರೆ. ಈತನನ್ನು ಚಿಕಿತ್ಸೆಗಾಗಿ ಕುದಿರವೆಟ್ಟ ಎಂಬಲ್ಲಿನ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ.