ಪುತ್ತೂರು : ಸಿಡಿಲಾಘಾತಕ್ಕೆ ಫೋಟೋ ಸ್ಟುಡಿಯೋ ಸುಟ್ಟು ಭಸ್ಮವಾದ ಘಟನೆ ಪುತ್ತೂರಿನಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಜಿಎಲ್ ಕಾಂಪ್ಲೆಕ್ಸ್ ನಲ್ಲಿರುವ ಪೊನ್ನಪ್ಪ ಎಂಬವರಿಗೆ ಸೇರಿದ ಅಡ್ಲ್ಯಾಬ್ ಸ್ಟುಡಿಯೋಗೆ ಸಿಡಿಲು ಬಡಿದಿದೆ. ಪರಿಣಾಮ ಪೋಟೊ ಸ್ಟುಡಿಯೋ ಸುಟ್ಟು ಭಸ್ಮವಾಗಿದೆ.ಸ್ಟುಡಿಯೋದಲ್ಲಿದ್ದ ಸಿಬ್ಬಂದಿ ಅದೃಷ್ಟವಶತ್ ಅಪಾಯದಿಂದ ಪಾರಾಗಿದೆ. ಸಿಡಿಲ ಹೊಡೆತಕ್ಕೆ ಸ್ಟುಡಿಯೋದಲ್ಲಿದ್ದ ಕಂಪ್ಯೂಟರ್ ಸಿಸ್ಟಂ, ಫೋಟೊ ಮೆಷಿನರಿ, ಪ್ಯಾನ್, ಫೋಟೊ ಆಲ್ಬಂ, ಇನ್ನಿತರ ವಸ್ತಗಳು ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಸುಮಾರು 6 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಘಟನೆಯ ಮಾಹಿತಿ ಪಡೆದ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಬೆಂಕಿ ನಂದಿಸಿದ್ದಾರೆ.