ಮಂಗಳೂರು : ತಮ್ಮ ವೀಸಾ ಅವಧಿ ಮುಗಿದರೂ ಮಂಗಳೂರಿನಲ್ಲಿದ್ದ ಇಬ್ಬರು ವಿದೇಶಿಯರನ್ನು ಕದ್ರಿ ಪೊಲೀಸರು ವಶಕ್ಕ ಪಡೆದಿದ್ದಾರೆ.
ವಶಕ್ಕೆ ಪಡೆದವರನ್ನು ಘಾನಾ ದೇಶದ ಸಲಾಂ ಕ್ರಿಸ್ಟೆನ್ ಮತ್ತು ನೈಜೀರಿಯಾದ ಅಂಕಿತೋಲ ಎಂಬ ಇಬ್ಬರು ವೀಸಾ ಅವಧಿ ಮೀರಿದ ಬಳಿಕವೂ ನಗರದಲ್ಲಿ ಉಳಕೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಹಸ್ತಾಂತರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.