ಉಡುಪಿ: ವಾಣಿಜ್ಯ ತೆರಿಗೆ ಅಧಿಕಾರಿಯ ಕುಂದಾಪುರದ ಮನೆ ಮೇಲೆ ಇಂದು(ಅ.30) ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ ನಡೆಸಿದೆ. ಕುಂದಾಪುರದ ಎಲ್.ಐ.ಸಿ. ರಸ್ತೆಯಲ್ಲಿರುವ ವಾಣಿಜ್ಯ ತೆರಿಗೆ ಸಹಾಯಕ ಅಭಿಯಂತರ ಅಧಿಕಾರಿ ರಾಜೇಶ್ ಬೆಳಕೇರಿ ಎಂಬುವರ ಮನೆಗೆ ನಸುಕಿನಲ್ಲಿಯೇ ದಾಳಿ ನಡೆಸಿರುವ ಲೋಕಾ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲದ ರಾಜೇಶ್ ಬೆಳ್ಕೆರೆಯವರಾಗಿತುವ ರಾಜೇಶ್ ಕುಂದಾಪುರದ ಎಲ್.ಐ.ಸಿ. ರಸ್ತೆಯ ವಡೇರಹೋಬಳ ಅಡ್ಡರಸ್ತೆಯಲ್ಲಿ ಜಾಗ ಖರೀದಿಸಿ ಬೃಹತ್ ಮನೆ ನಿರ್ಮಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಒಟ್ಟು ಎರಡು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದು, ಅಂಕೋಲದ ಬೇಳ್ಕೆರೆಯಲ್ಲಿಯೂ ದಾಳಿ ನಡೆಸಿದ್ದಾರೆ.