ಮಂಗಳೂರು: ಕಳೆದ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉತ್ತರ ಪೋಲಿಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕುತ್ತಾರ್ ಮೊಹಮ್ಮದ್ ಹನೀಪ್ ಯಾನೆ ಗುಜರಿ ಹನೀಫ್ ಎಂದು ಗುರುತಿಸಲಾಗಿದೆ.ನಗರದ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಈತ ನ್ಯಾಯಾಲಯಕ್ಕೆ ಹಾಜರಾಗದೇ ಹಾಗೂ ಪೊಲೀಸರ ಕೈಗೆ ಸಿಗದೇ ಕಳೆದ13 ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ.ನ್ಯಾಯಾಲಯವು LPC ಪ್ರಕರಣವೆಂದು ಪರಿಗಣಿಸಿ ವಾರೆಂಟ್ ಹೊರಡಿಸಿತ್ತು.ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.