ಮಂಗಳೂರು: ಮಂಗಳೂರಿನಿಂದ ಕೇರಳಕ್ಕೆ ಹೋಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಕಾಸರಗೋಡಿನಲ್ಲಿ ಪ್ರತೀ ದಿನ ಸರ್ವಿಸ್ ರೋಡ್ ಬಿಟ್ಟು ಪದೇ ಪದೇ ಹೈವೇ ಮುಖಾಂತರ ಹೋಗುತ್ತಿತ್ತು ಸಾಕಷ್ಟು ಬಾರೀ ಸರ್ವಿಸ್ ರೋಡ್ ನಲ್ಲೇ ಸಂಚರಿಸಿ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ ಎಂದು ಹಸೈನಾರ್ ಮನವಿ ಮಾಡಿದ್ದರು. ಆದರೇ ಅವರ ಮನವಿಗೆ ಕ್ಯಾರೇ ಎನ್ನದೆ ಸರ್ವಿಸ್ ರೋಡ್ ಬಿಟ್ಟು ಪದೇ ಪದೇ ಹೈವೇ ಮುಖಾಂತರ ಹೋಗುತ್ತಿದ್ದ ಬಸ್ಸನ್ನು ಹಸೈನಾರ್ ಅವರು ಸಿನಿಮೀಯ ರೀತಿಯಲ್ಲಿ ಬಸ್ ನ್ನ ಹೈವೇಯಿಂದಲೇ ವಾಪಸ್ ಕಳಿಸಿದ್ದಾರೆ. ಸ್ಥಳೀಯ ಉದ್ಯಮಿಯಾಗಿರುವ ಹಸೈನಾರ್ ರವರು ಹೈವೇ ನಡುವಲ್ಲೇ ಸ್ಟೂಲ್ ಇಟ್ಟು ಬಸ್ ನ್ನ ಹಿಂದಿರುಗಿಸಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ ಪ್ರತಿಭಟನೆ ಬಳಿಕ ಬಸ್ ಚಾಲಕ ಅರ್ಧ ಕಿಲೋಮೀಟರ್ ರಿವರ್ಸ್ ಹೋಗಿ ಬಳಿಕ ಸರ್ವಿಸ್ ರೋಡ್ ನಲ್ಲೇ ಸಂಚರಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಇನ್ನ್ನು ಜೈಲರ್ ಸಿನಿಮಾ ಸ್ಟೈಲ್ ನಲ್ಲೇ ಹಸೈನಾರ್ ಪ್ರತಿಭಟನೆ ನಡೆಸಿದ್ದಾರೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.