ಪುತ್ತೂರು : ಪುತ್ತಿಲ ಪರಿವಾರ ಕಚೇರಿ ಮುಂಭಾಗ ತಲವಾರು ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಶದಲ್ಲಿರುವ ಹಿಂದೂ ಜಾಗರಣ ವೇದಿಕೆಯ ದಿನೇಶ್ ಪಂಜಿಗ ಸೇರಿದಂತೆ 9 ಮಂದಿಗೆ ನವೆಂಬರ್ 15ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನವೆಂಬರ್ 10ರಂದು ಮಧ್ಯಾಹ್ನ ಪುತ್ತಿಲ ಪರಿವಾರದ ಕಚೇರಿ ಮುಂಭಾಗ ಕಾರಿನಲ್ಲಿ ಬಂದ ಜಾಗರಣ ವೇದಿಕೆಯ ದಿನೇಶ್ ಪಂಜಿಗ ಮತ್ತು ಅವರ ತಂಡ ತಲವಾರು ಪ್ರದರ್ಶಿಸಿ ಪುತ್ತಿಲ ಪರಿವಾರದ ಮನೀಶ್ ಕುಲಾಲ್ ಗೆ ಬೆದರಿಕೆ ಹಾಕಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಪೊಲೀಸರು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹಸಂಯೋಜಕ ದಿನೇಶ್ ಪಂಜಿಗ, ಭವಿತ್, ಮನ್ವಿತ್, ಜಯಪ್ರಕಾಶ್, ಚರಣ್, ಮನೀಶ್, ವಿನೀತ್ ಸೇರಿದಂತೆ ಇಬ್ಬರು ಅಪ್ರಾಪ್ತ ಬಾಲಕರ ಬಂಧಿಸಿದ್ದರು. ಇದೀಗ ನ್ಯಾಯಲಯ ಎಲ್ಲಾ ಆರೋಪಿಗಳಿಗೆ ನವೆಂಬರ್ 15 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.