ಬಜಪೆ : ನದಿಯ ನೀರಿಗೆ ಬಿದ್ದು ಯುವಕನೊಬ್ಬ ನೀರು ಪಾಲಾದ ಘಟನೆ ಪೊಳಲಿ ಸೇತುವೆ ಬಳಿ ಫಲ್ಗುಣಿ ನದಿಯಲ್ಲಿ ನಡೆದಿದೆ. ಕಾವೂರು ಆಕಾಶಭವನ ನಿವಾಸಿ ಪ್ರಶಾಂತ್ ಕುಮಾರ್(41) ನೀರುಪಾಲಾದ ಯುವಕ. ತನ್ನ ಗೆಳೆಯರೊಂದಿಗೆ ಪೊಳಲಿ ದೇವಸ್ಥಾನಕ್ಕೆ ತೆರಳಿದ್ದ ಪ್ರಶಾಂತ್ ಆಚಾರಿ, ನದಿಗೆ ಇಳಿದು ಸ್ನಾನ ಮಾಡಿದ್ದರು. ಅವರ ಶೂವೊಂದರ ದಾರ ನೀರಿನಲ್ಲಿ ನಾಪತ್ತೆಯಾಗಿತ್ತು. ಅದನ್ನು ಹೆಕ್ಕಲೆಂದು ನೀರಿಗೆ ಇಳಿದಿದ್ದ ವೇಳೆ ಅವರು ನದಿ ನೀರಿನಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಶಾಂತ್ ಆಚಾರಿ ವಿವಾಹಿತರಾಗಿದ್ದು, ತಿಂಗಳು ಪ್ರಾಯದ ಮಗು ಇದ್ದು, ಮಗುವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದೆ ಎನ್ನಲಾಗಿದೆ. ಸ್ಥಳಕ್ಕೆ ಬಜಪೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.