ತಂಬಾಕು ಸೇವನೆಯಿಂದ ಮಾನವನ ಆರೋಗ್ಯಕ್ಕೆ ತುಂಬಾ ಅಪಾಯ ಸಂಭವಿಸಿದೆ. ಇದನ್ನರಿತ ವಿಟ್ಲದ ಜನತೆ ಎಚ್ಚೆತ್ತು ತಂಬಾಕು ಮಾರಾಟದ ಕಾನೂನು ಬಾಹಿರ ನಿಯಂತ್ರಣಕ್ಕಾಗಿ ಸಂಬಂದಪಟ್ಟ ಇಲಾಖೆಗೆ ಲಿಖಿತ ರೂಪದಲ್ಲಿ ತಿಳಿಸಿರುತ್ತಾರೆ. ಈ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆ ಜಂಟಿಯಾಗಿ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಸುಮಾರು 6,600 ರೂ ದಂಡ ಸಂಗ್ರಹಿಸಿರುತ್ತಾರೆ. ದಂಡ ನೀಡಿರುವ ಹಲವು ಅಂಗಡಿ ಮಾಲಕರು ವಿಷಯವನ್ನು ಅರಿತು ಇನ್ನು ಮುಂದೆ ಕಾನೂನು ಬಾಹಿರವಾಗಿಯೂ ಅಲ್ಲದೆ ಮಾರಾಟವೇ ಮಾಡುವುದಿಲ್ಲ ಎಂಬುದಾಗಿ ತಿಳಿಸಿ ಉತ್ತಮವಾಗಿ ಇಲಾಖೆಯೊಂದಿಗೆ ಸ್ಪಂದಿಸಿರುತ್ತಾರೆ. ವಿಟ್ಲದ ಜನತೆಗೆ ಇಲಾಖೆ ಧನ್ಯವಾದ ವ್ಯಕ್ತಪಡಿಸಿದೆ.