Facebook Twitter Instagram
    Monday, September 14
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು : ಕರ್ನಾಟಕ ಒನ್ ಕಚೇರಿ ಅವ್ಯವಸ್ಥೆ ಖಂಡಿಸಿ ಸಾಮಾಜಿಕ ಹೋರಾಟಗಾರ ಜೆರಾರ್ಡ್ ಟವರ್ಸ್ ವಿಭಿನ್ನ ಪ್ರತಿಭಟನೆ..!
    ಇತ್ತೀಚಿನ ಸುದ್ದಿ

    ಮಂಗಳೂರು : ಕರ್ನಾಟಕ ಒನ್ ಕಚೇರಿ ಅವ್ಯವಸ್ಥೆ ಖಂಡಿಸಿ ಸಾಮಾಜಿಕ ಹೋರಾಟಗಾರ ಜೆರಾರ್ಡ್ ಟವರ್ಸ್ ವಿಭಿನ್ನ ಪ್ರತಿಭಟನೆ..!

    November 25, 2023
    Share

    ಮಂಗಳೂರು : ಸರಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ನಾನಾ ರೀತಿಯ ರೀತಿಯ ಸೌಲಭ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಕಾರ್ಯ ಮಾಡುತ್ತಿರುವ ಮಂಗಳೂರು ನಗರದ ಕದ್ರಿಯ ಕರ್ನಾಟಕ ಒನ್ ಕಚೇರಿಯಲ್ಲಿ ಕೆಲಸ ಕಾರ್ಯಗಳಿಗೆ ಹೋಗುವವರಿಗೆ ಗ್ಯಾರಂಟಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

    ಅದರಲ್ಲೂ ಹಿರಿ ಜೀವಿಗಳಿಗೆ ಈ ಕಛೇರಿ ಹೊಕ್ಕರೆ ಉಸಿರಾಟ ಸಮಸ್ಯೆಯಿಂದ ಜೀವಕ್ಕೆ ಸಂಚಕಾರ ಕೂಡ ಇದೆ. ಅವ್ಯವಸ್ಥೆಯ ಆಗರ ವಾಗಿರುವ ಈ ಕೇಂದ್ರ ವಿರುದ್ದ ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್ ಶನಿವಾರ ಕಚೇರಿಯಲ್ಲೇ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿ ಗಮನ ಸೆಳೆದರು.ಬಿಲ್ ಪಾವತಿಗಾಗಿ ಕಚೇರಿ ಒಳ ಹೋದ ಜೆರಾರ್ಡ್ ಟವರ್ಸ್ ಅವರು ಸೂಕ್ತ ಗಾಳಿಯ (ವೆಂಟಿಲೇಶನ್) ವ್ಯವಸ್ಥೆ ಇಲ್ಲದೆ ಮೂರ್ಚೆ ಹೋದಾಗ ಅಲ್ಲಿದ್ದ ಸಾರ್ವಜನಿಕರು ಅವರನ್ನು ನೀರು ಕುಡಿಸಿ ಉಪಚರಿಸಿದರು.ಸಾಮಾಜಿಕ ಹೋರಾಟಗಾರ ಜಿ.ಕೆ. ಭಟ್ ಅವರೂ ಸಾಥ್ ನೀಡಿದರು ಬಳಿಕ ಮಾತನಾಡಿದ ಜೆರಾಲ್ಡ್ ನಾನು ಜನರ ಸಮಸ್ಯೆಗಳಿಗಾಗಿ ಇಂದು ಮೂರ್ಛೆ ಹೋಗುವ ನಾಟಕ ಆಡಬೇಕಾಗಿ ಬಂತು. ಈ ಕಚೇರಿಯಲ್ಲಿ ಕಳೆದ ಹಲವು ಸಮಯದಿಂದ ಹಲವಾರು ಮಂದಿ ಇದೇ ರೀತಿ ನೈಜವಾಗಿ ಮೂರ್ಛೆ ಹೋದಾಗ ನಾನು ಸೇರಿದಂತೆ ಹಲವು ಸಾರ್ವಜನಿಕರು ಉಪಚರಿಸಿದ್ದೇವೆ. ಇಲ್ಲಿನ ಅವ್ಯವಸ್ಥೆಯ ಬಗ್ಗೆ ಕಳೆದ ಸುಮಾರು ನಾಲ್ಕೈದು ತಿಂಗಳಿನಿಂದ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಕ್ರಮವಾಗಿಲ್ಲ’ ಎಂದು ಜೆರಾರ್ಡ್ ಟವರ್ಸ್ ಬಳಿಕ ಸುದ್ದಿಗಾರರ ಜತೆ ತಮ್ಮ ಅನಿಸಿಕೆ ಹಂಚಿಕೊಂಡರು.

    ಕಚೇರಿಯ ಎಸಿ ಹಾಳಾಗಿ ಸುಮಾರು 10 ತಿಂಗಳು ಕಳೆದಿದೆ. ಕಚೇರಿಯಲ್ಲಿ ಪ್ರಾಕೃತಿಕ ಗಾಳಿ ಬರಲು ಕಿಟಕಿಗಳೇ ಇಲ್ಲ. ಇಲ್ಲಿ ದಿನವೊಂದಕ್ಕೆ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು, ವಿಕಲಚೇತನರು ಸೇರಿದಂತೆ ನೂರಾರು ಮಂದಿ ನಿತ್ಯ ನಾನಾ ರೀತಿಯ ಕೆಲಸ ಕಾರ್ಯಗಳಿಗೆ ಆಗಮಿಸುತ್ತಾರೆ.ಗ್ಯಾರಂಟಿ ಯೋಜನೆಗಳ ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ದಿನದಲ್ಲಿ ಗಂಟೆಯೊಂದಕ್ಕೆ ಸುಮಾರು 300ರಷ್ಟು ಮಂದಿ ಇಲ್ಲಿ ಅರ್ಜಿ ಸಲ್ಲಿಸುವುದನ್ನು ಕಂಡಿದ್ದೇನೆ. ಹಾಗಿದ್ದರೂ ಇಲ್ಲಿ ಕುಡಿಯಲು ನೀರಿಲ್ಲ. ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲ. ಬರೆಯಲು ಟೇಬಲ್ ವ್ಯವಸ್ಥೆ ಇಲ್ಲ. ಕಚೇರಿ ಹೊರಗಡೆ ಸ್ವಚ್ಛತೆ ಇಲ್ಲ’ ಎಂದು ಆರೋಪಿಸಿದರು.ಕದ್ರಿಯ ಈ ಕರ್ನಾಟಕ ಒನ್ ಕಚೇರಿಯಲ್ಲಿನ ಎಸಿ ಹಾಳಾಗಿರುವ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಮೂರು ತಿಂಗಳಾದರೂ ಕ್ರಮವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    Post Views: 286

    Related Posts

    ಸೆ.18ಕ್ಕೆ ತೆರೆಕಾಣಲಿದೆ ‘ಟಾಸ್’: ತುಳು-ಕನ್ನಡದಲ್ಲಿ ಸಿದ್ಧವಾದ ಅರ್ಜುನ್ ದೇವ್ ನಿರ್ದೇಶನದ ಸಿನಿಮಾ

    September 14, 2026

    ಮಂಗಳೂರು: ಸಾರ್ವಜನಿಕವಾಗಿ ತಲಾವಾರು ಹಿಡಿದು ಗ್ಯಾಂಗ್ ವಾರ್ ಗೆ ಯತ್ನ..!! ಪೊಲೀಸರಿಂದ ಸ್ವಯಂಪ್ರೇರಿತ ಪ್ರಕರಣ ದಖಾಲು

    September 13, 2026

    ಬೆಳ್ತಂಗಡಿ: ಕೃಷಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಜಾತಿನಿಂದನೆ, ಜೀವ ಬೆದರಿಕೆ: ಆರೋಪಿ ಬಂಧನ

    September 13, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಸೆ.18ಕ್ಕೆ ತೆರೆಕಾಣಲಿದೆ ‘ಟಾಸ್’: ತುಳು-ಕನ್ನಡದಲ್ಲಿ ಸಿದ್ಧವಾದ ಅರ್ಜುನ್ ದೇವ್ ನಿರ್ದೇಶನದ ಸಿನಿಮಾ

    September 14, 2026

    ಮಂಗಳೂರು: ಸಾರ್ವಜನಿಕವಾಗಿ ತಲಾವಾರು ಹಿಡಿದು ಗ್ಯಾಂಗ್ ವಾರ್ ಗೆ ಯತ್ನ..!! ಪೊಲೀಸರಿಂದ ಸ್ವಯಂಪ್ರೇರಿತ ಪ್ರಕರಣ ದಖಾಲು

    September 13, 2026

    ಬೆಳ್ತಂಗಡಿ: ಕೃಷಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಜಾತಿನಿಂದನೆ, ಜೀವ ಬೆದರಿಕೆ: ಆರೋಪಿ ಬಂಧನ

    September 13, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.