ಸುರತ್ಕಲ್: ಸುರತ್ಕಲ್ ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹ ಸ್ಥಗಿತಗೊಂಡು ಒಂದು ವರ್ಷವಾಗಿದ್ದು, ಇದೀಗ ಟೋಲ್ ಗೇಟ್ ನಲ್ಲಿದ್ದ ಹಳೆಯ ಬೂತ್ ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಇಂದು ತೆರವುಗೊಳಿಸಿದೆ.
ಸುರತ್ಕಲ್ ಟೋಲ್ ಗೇಟ್ ಸ್ಥಗಿತಗೊಂಡು ಒಂದು ವರ್ಷ ಪೂರ್ಣಗೊಂಡಿದ್ದು, ಈ ನಡುವೆ ಹಳೆ ಟೋಲ್ ಗೇಟ್ ನ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಕಾಂಕ್ರೀಟಿಕರಣಗೊಂಡಿಸಿತ್ತು, ಇದು ಮತ್ತೆ ಟೋಲ್ ಸಂಗ್ರಹ ಪ್ರಾರಂಭವಾಗುವ ಸಾಧ್ಯತೆ ಇತ್ತು ಎಂಬ ವದಂತಿ ಸಾರ್ವಜನಿಕರಲ್ಲಿ ಇತ್ತು, ಆದರೆ ಇದೀಗ ಆತಂಕಕ್ಕೆ ಕಾರಣವಾಗಿದ್ದ ಸುರತ್ಕಲ್ ನಿರುಪಯುಕ್ತ ಟೋಲ್ ಗೇಟ್ ನ ಕೆಲವು ಟೋಲ್ ಸಂಗ್ರಹ ಬೂತ್ ಗಳನ್ನು ಹೆದ್ದಾರಿ ಪ್ರಾಧಿಕಾರ ಇಂದು ತೆರವುಗೊಳಿಸಿದೆ.
ನಾಳೆ ಡಿಸೆಂಬರ್ 1 ರಂದು ಸುರತ್ಕಲ್ ಟೋಲ್ ಸಂಗ್ರಹ ರದ್ದು ಗೊಂಡು ಹೋರಾಟ ಗೆಲುವು ಸಾಧಿಸಿದ ದಿನವಾಗಿದ್ದು, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಗೆಲುವಿನ ಸಂಭ್ರಮಾಚರಣೆ ಹಾಗೂ ಅದೇ ಸಂದರ್ಭ ನಿರುಪಯುಕ್ತ ಟೋಲ್ ಗೇಟ್ ರಚನೆ ತೆರವುಗೊಳಿಸಲಾಗುತ್ತಿದೆ.
ಸಂಭ್ರಮಾಚರಣೆಯ ಮುನ್ನಾ ದಿನ ನಿರುಪಯುಕ್ತ ಟೋಲ್ ಗೇಟ್ ಪಾಳು ಬಿದ್ದ ಬೂತ್ ಗಳನ್ನು ತೆರವುಗೊಳಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮತ್ತೆ ಹೋರಾಟ ಭುಗಿಲೇಳುವ ಸಾಧ್ಯತೆಗಳ ಹಿನ್ನಲೆಯಲ್ಲಿ ಈ ಅಲ್ಪ ಪ್ರಮಾಣದ ತೆರವು ಪ್ರಕ್ರಿಯೆ ಇದಾಗಿರಬಹುದು , ಅಥವಾ ನೂತನವಾಗಿ ಹೊಸದಾಗಿ ಟೋಲ್ ಬೂತ್ ನಿರ್ಮಾಣಕ್ಕೆ ಕೆಲಸ ನಡೆಯುತ್ತಿದೆಯಾ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.