ಮೈಸೂರು: ಜಿಲ್ಲೆಯ ಬಳ್ಳೆ ಆನೆ ಶಿಬರದಲ್ಲಿದ್ದಂತ ಸತತ 8 ಬಾರಿ ಮೈಸೂರಿನ ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತಿದ್ದಂತ ಅರ್ಜುನ (64) ಆನೆ ಒಂಟಿ ಸಲಗದ ದಾಳಿಯಿಂದ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಕಾಕನಕೋಟೆಯಲ್ಲಿ 1968ರಲ್ಲಿ ಖೆಡ್ಡಾಗೆ ಅರ್ಜುನ(64) ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೆಡವಿ ಸೆರೆ ಹಿಡಿದಿದ್ದರು.
ಅದನ್ನ ಪಳಗಿಸಿದ ನಂತ್ರ, ಬಳ್ಳೆ ಆನೆ ಶಿಬಿರದಲ್ಲಿ ಇರಿಸಲಾಗಿತ್ತು.
ಇಂತಹ ಅರ್ಜುನ ಆನೆ ಸತತ 8 ಬಾರಿ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಬೇಷ್ ಎನಿಸಿಕೊಂಡಿತ್ತು. ಇದೀಗ ಈ ಅರ್ಜುನ ಆನೆ ಒಂಟಿ ಸಲಗದ ದಾಳಿಯಿಂದ ಸಾಕಾನೆ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಒಟ್ಟಾರೆಯಾಗಿ ಸತತ 8 ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ತನ್ನ ಗಾಂಭೀರ್ಯವನ್ನು ಮೆರೆದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಂತ ಅರ್ಜು, ಇದೀಗ ಬಳ್ಳೆ ಆನೆ ಶಿಬಿರದಲ್ಲಿ ಒಂಟಿ ಸಲಗದ ದಾಳಿಗೆ ಒಳಗಾಗಿ ಸಾವನ್ನಪ್ಪಿದೆ. ಈ ಮೂಲಕ ಅರ್ಜುನ ಇನ್ನಿಲ್ಲವಾಗಿದ್ದಾನೆ.