ಉಡುಪಿ :ಪಿಕಪ್ ಬೈಕ್ ಸವಾರನಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಹಾಲಿನ ಬೂತ್ ನ ಕ್ರೇಟ್ ಗಳಿಗೆ ಢಿಕ್ಕಿಯಾದ ಘಟನೆ ಉಡುಪಿಯ ಕಡಿಯಾಳಿಯಲ್ಲಿ ನಡೆದಿದೆ.
ಇಂದು ಮುಂಜಾನೆ 4.15 ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮಿಲ್ಕ್ ಬೂತ್ ಮತ್ತು ವಸ್ತುಗಳಿಗೆ ಅಪಾರ ಹಾನಿಯಾಗಿದೆ. ರಸ್ತೆಯಲ್ಲಿ ಹಾಲಿನ ಪ್ಯಾಕೇಟ್ ಹರಿದು ಹಾಲು ರಸ್ತೆಯ ತುಂಬೆಲ್ಲಾ ಚೆಲ್ಲಿದೆ. ಈ ದೃಶ್ಯ ಮಿಲ್ಕ್ ಬೂತ್ ಗೆ ಅಳವಡಿಸಲಾದ ಸಿಸಿಟಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.