ಬಂಟ್ವಾಳ: ದನಗಳನ್ನು ಕದ್ದು ಕಾರಿನಲ್ಲಿ ಕೊಂಡೊಯ್ಯುವ ವೇಳೆ ಬಂಟ್ವಾಳ ನಗರ ಠಾಣಾ ಎಸ್.ಐ.ರಾಮಕೃಷ್ಣ ನೇತ್ರತ್ವದ ತಂಡ ದನಗಳನ್ನು
ರಕ್ಷಣೆ ಮಾಡಿದ್ದಾರೆ.
ಪರಾರಿಯಾಗಲು ಯತ್ನಿಸಿದ್ದ ಇಬ್ಬರು ಆರೋಪಿಗಳಾದ ಜಾಬೀರ್ ಮತ್ತು ನಾಸೀರ್ ಎಂಬವವರನ್ನು ಪೋಲೀಸರು ಬಂಧಿಸಿದ್ದಾರೆ. ಲೊರೆಟ್ರೊಪದವು ಸಮೀಪದ ಟಿಪ್ಪು ನಗರ ಎಂಬಲ್ಲಿಂದ ಕಾರನ್ನು ಬೆನ್ನಟ್ಟಿದ ಪೋಲೀಸರು ದನಗಳ ಸಹಿತ ಆರೋಪಿಳನ್ನು ವಶಪಡಿಸಿಕೊಂಡಿದ್ದಾರೆ.
Omni ಕಾರಿನಲ್ಲಿ ಐದು ದನಗಳನ್ನು ಕೈ ಕಾಲು ಕಟ್ಟಿ ತುಂಬಿಸಲಾಗಿತ್ತು. ಇಬ್ಬರು ಕೂಡ ಈ ಹಿಂದೆ ದನ ಕಳವು ಪ್ರಕರಣದ ಪ್ರಮುಖ
ಆರೋಪಿಗಳೆಂದು ತಿಳಿದು ಬಂದಿದೆ.