ಕುಂದಾಪುರ : 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಬಾವಿಗೆ ಬಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದ ಕೋಣಿ ಎಂಬಲ್ಲಿ ಡಿಸೆಂಬರ್ 20ರ ಬುಧವಾರ ಸಂಜೆ ನಡೆದಿದೆ. ಮೃತ ಬಾಲಕಿಯನ್ನು ಕೋಣಿ ನಿವಾಸಿ ರಾಜಶೇಖರ ಎಂಬವರ ಪುತ್ರಿ ರಿಷಿತಾ (13) ಎಂದು ಗುರುತಿಸಲಾಗಿದೆ.
ರಿಷಿತಾ ನಿನ್ನೆ ಸಂಜೆ ಶಾಲೆ ಮುಗಿಸಿ ಬಂದು ಮನೆ ಬಳಿ ಇದ್ದ ಬೊಬ್ಬರ್ಯ ದೇವಸ್ಥಾನದ ಬಳಿ ತೆರಳಿದ್ದು, ಸ್ವಲ್ಪ ಹೊತ್ತಾದರು ವಾಪಾಸು ಬಾರದೇ ಇದ್ದಾಗ ತಾಯಿ ಹುಡುಕಾಡಿದಾಗ ಮನೆಯ ಬಾವಿ ಬಳಿ ಆಕೆಯ ಮೃತದೇಹ ಪತ್ತೆಯಾಗಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ರಿಷಿತಾಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ