Facebook Twitter Instagram
    Monday, September 14
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮೂಡುಬಿದಿರೆ: ವಿವಿಧ ಕಡೆಗಳಲ್ಲಿ ಜಾನುವಾರು ಕಳ್ಳತನ – ಇಬ್ಬರು ಪೊಲೀಸರ ವಶಕ್ಕೆ
    ಇತ್ತೀಚಿನ ಸುದ್ದಿ

    ಮೂಡುಬಿದಿರೆ: ವಿವಿಧ ಕಡೆಗಳಲ್ಲಿ ಜಾನುವಾರು ಕಳ್ಳತನ – ಇಬ್ಬರು ಪೊಲೀಸರ ವಶಕ್ಕೆ

    December 28, 2023
    Share

    ಮೂಡುಬಿದಿರೆ: ಕಾರುಗಳಲ್ಲಿ ಹೋಗಿ ವಿವಿಧ ಕಡೆಗಳಿಂದ ದನಗಳನ್ನು ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಬಜ್ಪೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಗಳೂರು ತಾಲೂಕು ಬಡಗ ಎಡಪದವು ಗ್ರಾಮದ ಕಿನ್ನಿಮಜಲು ನಿವಾಸಿ ಚಂದನ್ ಉಪಾಧ್ಯಾಯ ಎಂಬವರು ಡಿ. 14 ರಂದು ಬೆಳಿಗ್ಗೆ ಮೇಯಲು ಬಿಟ್ಟ ದನಗಳ ಪೈಕಿ 2 ಹಸುಗಳು ಮತ್ತು 1 ಕರುವನ್ನು ಯಾರೋ ಕಳ್ಳರು ಕಳವು ಮಾಡಿರುವ ಬಗ್ಗೆ ನೀಡಿರುವ ದೂರಿನ ಆಧಾರದಲ್ಲಿ ಬಜಪೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು‌. ಈ ಹಿನ್ನೆಲೆಯಲ್ಲಿ ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂದೀಪ್ ಅವರ ಆದೇಶದಂತೆ ಬುಧವಾರ ಬೆಳಗ್ಗಿನ ಜಾವ ಸುಮಾರು 03-30 ಗಂಟೆಗೆ PSI ಕುಮಾರೇಶನ್ ಅವರು ಸಿಬ್ಬಂದಿಗಳ ಜೊತೆ ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮದ ದಡ್ಡಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಮೂಡುಬಿದಿರೆಯ ಗಂಟಲಾಕಟ್ಟೆಯ ನಿವಾಸಿ ನಾಸೀರ್ ಯಾನೆ ನಾಚಿ ಮತ್ತು ಪಡುಕೊಣಾಜೆ ಗ್ರಾಮ ನೀರಲ್ಕೆ ನಿವಾಸಿ ಇಮ್ರಾನ್ ಇಬ್ರಾಹಿಂ ಎಂಬವರಿಂದ ದನ ಕಳವು ಮಾಡಲು ಉಪಯೋಗಿಸಿರುವ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ನೀಲಿ ಬಣ್ಣದ KA 41 Z 5664 ನೇ ನಂಬ್ರದ ಸಿಫ್ಟ್ ಕಾರು ಮತ್ತು ಬಳಿ ಬಣ್ಣದ KA 20 Z 0010 ನೇ ನಂಬ್ರದ ರಿಡ್ಜ್ ಕಾರುಗಳನ್ನು ಹಾಗು ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಈ ಪ್ರಕರಣದಲ್ಲಿ ದನ ಕಳವು ಮಾಡಿ ಹತ್ಯೆ ಮಾಡಿರುವ ತೋಡಾರು, ಹಂಡೇಲು, ಉಳಾಯಿಬೆಟ್ಟು ಮತ್ತು ಗಂಟಲ್ ಕಟ್ಟೆ ಕಡೆಯ ಪ್ರಮುಖ ಆರೋಪಿತರ ಪತ್ತೆಗೆ ಬಾಕಿಯಿದ್ದು ಇವರ ಪತ್ತೆಯ ಬಗ್ಗೆ ವಿಶೇಷ ತಂಡ ರಚನೆ ಮಾಡಲಾಗಿರುತ್ತದೆ. ಈ ಪತ್ತೆ ಕಾರ್ಯವನ್ನು ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ IPS ಅವರ ಮಾರ್ಗದರ್ಶನದಂತೆ, ಡಿಸಿಪಿ ಸಿದ್ದಾರ್ಥ ಗೋಯೆಲ್ (ಕಾ&ಸು) ಮತ್ತು ದಿನೇಶ್ ಕುಮಾರ್ (ಅಪರಾಧ ಮತ್ತು ಸಂಚಾರ) ರವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ಮತ್ತು ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್ ರವರ ನೇತೃತ್ವದಲ್ಲಿ ಪಿ.ಎಸ್.ಐ ಕುಮಾರೇಶನ್, ಗುರಪ್ಪ ಕಾಂತಿ, ರೇವಣ ಸಿದ್ದಪ್ಪ, ಬಜಪೆ ಪೊಲೀಸ್ ಠಾಣೆಯ ಅಪರಾಧ ಪತ್ತೆ ವಿಭಾಗದ ಸಿಬಂಧಿಗಳಾದ ಎಎಸ್ ಐ ರಾಮ ಪೂಜಾರಿ, ಸುಜನ, ರಶೀದ ಶೇಖ್, ಬಸವರಾಜ್, ಕೆಂಚನಗೌಡ, ದುರ್ಗಾಪ್ರಸಾದ, ಅನಿಲ್ ಕುಮಾರ್, ಮದು, ಪ್ರಕಾಶ್, ವಿರುಪಾಕ್ಷ, ಭರಮಪ್ಪ ಮತ್ತು ಇತರ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.

    Post Views: 212

    Related Posts

    ಮಂಗಳೂರು: ಸಾರ್ವಜನಿಕವಾಗಿ ತಲಾವಾರು ಹಿಡಿದು ಗ್ಯಾಂಗ್ ವಾರ್ ಗೆ ಯತ್ನ..!! ಪೊಲೀಸರಿಂದ ಸ್ವಯಂಪ್ರೇರಿತ ಪ್ರಕರಣ ದಖಾಲು

    September 13, 2026

    ಬೆಳ್ತಂಗಡಿ: ಕೃಷಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಜಾತಿನಿಂದನೆ, ಜೀವ ಬೆದರಿಕೆ: ಆರೋಪಿ ಬಂಧನ

    September 13, 2026

    ಮಂಗಳೂರು: ನಾನು ಮೀಡಿಯಾದವನು ಎಂದು ಬೆದರಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ- ಪ್ರಕರಣ ದಾಖಲು

    September 12, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಂಗಳೂರು: ಸಾರ್ವಜನಿಕವಾಗಿ ತಲಾವಾರು ಹಿಡಿದು ಗ್ಯಾಂಗ್ ವಾರ್ ಗೆ ಯತ್ನ..!! ಪೊಲೀಸರಿಂದ ಸ್ವಯಂಪ್ರೇರಿತ ಪ್ರಕರಣ ದಖಾಲು

    September 13, 2026

    ಬೆಳ್ತಂಗಡಿ: ಕೃಷಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಜಾತಿನಿಂದನೆ, ಜೀವ ಬೆದರಿಕೆ: ಆರೋಪಿ ಬಂಧನ

    September 13, 2026

    ಮಂಗಳೂರು: ನಾನು ಮೀಡಿಯಾದವನು ಎಂದು ಬೆದರಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ- ಪ್ರಕರಣ ದಾಖಲು

    September 12, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.