ಬಂಟ್ವಾಳ: ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ನಿರಂತರವಾಗಿ ಪಿಕ್ ಪಾಕೆಟ್ ನಡೆಯುತ್ತಿದ್ದು, ಮಹಿಳೆಯೋರ್ವರ ಬ್ಯಾಗ್ ನಿಂದ 4 ಸಾವಿರ ರೂ. ನಗದು ಕಳವು ಮಾಡಿದ ಘಟನೆ ಡಿ.೧೦ ರಂದು ನಡೆದಿದೆ.
ಪ್ರೇಮ ಅವರು ಬೊಳಿಯಾರಿನಿಂದ ಧರ್ಮಸ್ಥಳ ಕಡೆಗೆ ಹೊರಟಿದ್ದರು. ಬೋಳಿಯಾರಿನಿಂದ ಬಿಸಿರೋಡಿಗೆ ಬಂದಿಳಿದು ಬಳಿಕ ಕೈಯಲ್ಲಿ ಮಗುವನ್ನು ಹಿಡಿದುಕೊಂಡುಧರ್ಮಸ್ಥಳ ಬಸ್ ಗೆ ಹತ್ತುವ ವೇಳೆ ಬ್ಯಾಗ್ ನಿಂದ ಹಣವನ್ನು ಕಳವು ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಇನ್ನು ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಿ.ಸಿ.ಕ್ಯಾಮರಾ ಇಲ್ಲ:ಕಳೆದ ವಾರ ಈ ಬಗ್ಗೆ ವಿಸ್ತ್ರತವಾದ ವರದಿ ಮಾಡಲಾಗಿದೆಯಾದರೂ ಪೋಲಿಸ್ ಇಲಾಖೆ ಮಾತ್ರ ಯಾವುದೇ ಸ್ಪಂದನೆ ನೀಡಿಲ್ಲ, ಕಳ್ಳತನ, ಪಿಕ್ ಪಾಕೆಟ್ ನಿತ್ಯ ನಡೆಯುತ್ತಿದೆ.ಕಳ್ಳತನದ ಬಗ್ಗೆ ಪೋಲೀಸರು ಸೂಕ್ತವಾದ ತನಿಖೆ ನಡೆಸದೆ ದೂಳು ಹಿಡಿಯುವಾಗೆ ಮಾಡಿದ್ದು ಕಳ್ಳರಿಗೆ ಮತ್ತೆ ಮತ್ತೆ ಕಳವು ಮಾಡುವುದಕ್ಕೆ ಅನುಕೂಲವಾಗುವಂತೆ ಮಾಡಿದೆ.ಕಳ್ಳತನದ ಬಗ್ಗೆ ಮಾಹಿತಿ ಪಡೆಯಲು ಬಸ್ ನಿಲ್ದಾಣದಲ್ಲಿ ಪೋಲೀಸ್ ಇಲಾಖೆಯ ಸಿ.ಸಿ.ಕ್ಯಾಮರಾ ಇಲ್ಲವಂತೆ, ಈ ಬಗ್ಗೆ ಪೋಲೀಸರೇ ದೂರು ದಾರರಿಗೆ ಮಾಹಿತಿ ನೀಡಿದ್ದಾರೆ.ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿ ಪೋಲೀಸರು ತಮ್ಮ ಕೈ ತೊಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.ಕಳೆದ ವಾರ ಹತ್ತಾರು ಮೊಬೈಲ್ ಪೋನ್ ಹಾಗೂ ಪಿಕ್ ಪಾಕೆಟ್ ಗಳು ನಡೆದಿವೆಯಾದರೂ ಪೊಲೀಸ್ಇಲಾಖೆ ಮಾತ್ರ ಮೌನವಾಗಿದೆ.ಪೋಲಿಸ್ ಇಲಾಖೆಯಿಂದ ಮಾರುದ್ದ ದೂರವಿರುವ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಪೊಲೀಸರು ಕಾರ್ಯ ನಿರ್ವಹಿಸುತ್ತಿರುವ ವೇಳೆ ಹಗಲು ಹೊತ್ತಿನಲ್ಲಿ ಪಿಕ್ ಪಾಕೆಟ್ ಗಳು ನಡೆಯುತ್ತಿರುವುದು ವಿಷಾಧನೀಯ ಎಂದು ಹೇಳಲಾಗುತ್ತಿದೆ.
ಕೂಡಲೇ ಪೋಲೀಸ್ ಇಲಾಖೆ ಅಯಕಟ್ಟಿನ ಮತ್ತು ಜನಸಂದಣಿಯ ಕಡೆಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿ ಕಳ್ಳತನ ಮಾಡುವ ಆರೋಪಿಗಳಿಗೆ ಕಾನೂನಡಿಯಲ್ಲಿ ಶಿಕ್ಷೆ ನೀಡಿದರೆ ಮುಂದಿನ ದಿನಗಳಲ್ಲಿ ಕಳವು ಪ್ರಕರಣಗಳು ಕಡಿಮೆಯಾಗಬಹುದು ಎಂದು ಸಾರ್ವಜನಿಕ ರು ಹೇಳುತ್ತಿದ್ದಾರೆ.