ಉಳ್ಳಾಲ: ಮಂಗಳೂರು ಸಮೀಪದಲ್ಲಿ ಮಾದಕ ವಸ್ತು ಅಕ್ರಮ ಸಾಗಾಟ ನಡೆಸುತ್ತಿದ್ದ ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಸಿಯಾಮು(26)ನನ್ನು ಎಸಿಪಿ ಧನ್ಯಾ ಎನ್. ನಾಯಕ್ ನೇತೃತ್ವದ ಆ್ಯಂಟಿ ಡ್ರಗ್ ಟೀಮ್ ಬಂಧಿಸಿದ್ದು, ಆತನಿಂದ 1.05 ಗ್ರಾಂ ಎಂಡಿಎಂಎ ಮಾದಕ ವಸ್ತು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಲ್ಲಾಪು ಯುನಿಟಿ ಹಾಲ್ ಬದಿಯ ಮೈದಾನದ ಬಳಿ ದಾಳಿ ನಡೆಸಿ ಸಿಯಾಮುನನ್ನು ಬಂಧಿಸಲಾಗಿದೆ.
ಆ್ಯಂಟಿ ಡ್ರಗ್ ಟೀಮ್ ರಚನೆಯಾದ ಬಳಿಕ 4 ದೊಡ್ಡ ಪ್ರಕರಣ ಸೇರಿದಂತೆ 65 ಪ್ರಕರಣಗಳು ದಾಖಲಾಗಿದ್ದು, 6 ಆರೋಪಿಗಳು ಜೈಲು ಪಾಲಾಗಿದ್ದು, ಲಕ್ಷಾಂತರ ಮೌಲ್ಯದ ಗಾಂಜಾ, ಎಂಡಿಎಂಎ, ಎಲ್ಎಸ್ಡಿ ಸ್ಟಿಕ್ಕರ್ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಉಪ ಆಯುಕ್ತರಾದ ಸಿದ್ಧಾರ್ಥ ಗೋಯಲ್, ದಿನೇಶ್ ಕುಮಾರ್ ನಿರ್ದೇಶನದಲ್ಲಿ ಎಸಿಪಿ ಧನ್ಯಾ ನಾಯಕ್ ಮತ್ತು ಇನ್ಸ್ಪೆಕ್ಟರ್ ಬಾಲಕೃಷ್ಣ ಎಚ್.ಎನ್. ನೇತೃತ್ವದಲ್ಲಿ ಉಳ್ಳಾಲ ಪಿಎಸ್ಐ ಧನರಾಜ್ ಎಸ್., ಆ್ಯಂಟಿ ಡ್ರಗ್ ಟೀಮ್ನ ಶಾಜು ನಾಯರ್, ಮಹೇಶ್, ಆಕರ್ಯಡ್ರಾಮಿ, ನವೀನ್ ಕೆ.ಪಿ. ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.