ಮಂಗಳೂರು: ನಗರದ ಕೈಕಂಬ ಸಮೀಪ ಪ್ರಕರಣವೊಂದಕ್ಕೆ ನ್ಯಾಯಾಲಯದಿಂದ 5 ವರ್ಷಗಳ ಶಿಕ್ಷೆಗೆ ಒಳಗಾಗಿದ್ದ ವಿಟ್ಲ ಕರಪಾಡಿ ಗ್ರಾಮದ ಮುಗೋಳಿ ಮನೆಯ ಫಾರೂಕ್ ಯಾನೆ ಫಾರೂಕ್ ಅಹಮ್ಮದ್ (36 ) ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಆತನನ್ನು ಕಾಸರಗೋಡು ಜಿಲ್ಲೆಯ ಉಪ್ಪಳದ ಮುಳಿಗದ್ದೆಯಿಂದ ಬಜಪೆ ಪೊಲೀಸ್ ನಿರೀಕ್ಷಕ ಸಂದೀಪ್ ನೇತೃತ್ವದ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಮಾರ್ಗದರ್ಶನದಂತೆ, ಡಿಸಿಪಿಯವರಾದ ಸಿದ್ದಾರ್ಥ ಗೋಯೆಲ್ (ಕಾ.ಮತ್ತು ಸು) ಮತ್ತು ದಿನೇಶ್ ಕುಮಾರ್ (ಅಪರಾಧ ಮತ್ತು ಸಂಚಾರ) ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ಮತ್ತು ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎನ್. ನೇತೃತ್ವದಲ್ಲಿ ಪಿಎಸ್‌ಐಗಳಾದ ಗುರಪ್ಪ ಕಾಂತಿ, ರೇವಣ ಸಿದ್ದಪ್ಪ ಮತ್ತು ಸಿಬಂದಿ ವರ್ಗದ ಎ.ಎಸ್.ಐ ರಾಮ ಪೂಜಾರಿ, ಎಚ್‌ಸಿ ಗಳಾದ ಜಗದೀಶ್, ಸುಜನ್ ಪಿಸಿಗಳಾದ ಬಸವರಾಜ್ ಪಾಟೀಲ್, ಕೆಂಚಪ್ಪ ಅವರು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.