545 ಪೊಲೀಸ್ ಸಬ್ ಇನ್ಸ್ ಸ್ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮದ ನಂತ್ರ, ಪರೀಕ್ಷೆ ರದ್ದುಗೊಂಡಿತ್ತು. ಈ ಹುದ್ದೆಗಳಿಗೆ ಮರು ಪರೀಕ್ಷೆಯನ್ನು ನಡೆಸಲಾಗಿತ್ತು, ಸುಸೂತ್ರವಾಗಿ ನಡೆದಿದೆ. ಈ ಬೆನ್ನಲ್ಲೇ ಪಿಎಸ್‌ಐ ಆಗ್ಬೇಕು ಅನ್ನೋರಿಗೆ ಗುಡ್ ನ್ಯೂಸ್ ಎನ್ನುವಂತೆ ಸದ್ಯದಲ್ಲೇ 403, ಆ ನಂತ್ರ 600 ಪಿಎಸ್‌ಐ ನೇಮಕಾತಿಗೆ ಅಧಿಸೂಚನೆ ಹೊರ ಬೀಳಲಿದೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ಪಿಎಸ್‌ಐ ಪರೀಕ್ಷೆ ಬಹಳ ಸುಗಮವಾಗಿ ಆಗಿದೆ. ಯಾವುದೇ ಘಟನೆ ನಡೆದಿಲ್ಲ. ಅಂತಹ ಯಾವುದೇ ಪ್ರಯತ್ನವೂ ನಡೆದಿಲ್ಲ. ಸುಮಾರು 54 ಸಾವಿರ ಮಂದಿ ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಅದರಲ್ಲಿ ಕೆಲವರು ಗೈರಾಗಿದ್ದಾರೆ ಎಂದರು.
ಈ 545 ಪಿಎಸ್‌ಐ ನೇಮಕಾತಿ ಬಳಿಕ 400 ಪಿಎಸ್‌ಐ ಹುದ್ದೆಗಳನ್ನು ಕೆಇಎ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಕೆಇಎ ನಿರ್ದೇಶಕಿ ರಮ್ಯಾ ಅವರನ್ನು ಸುಸೂತ್ರವಾಗಿ ನಡೆಸುವಂತೆ ಮನವಿ ಮಾಡುತ್ತೇನೆ. ಇದಾದ ಬಳಿಕ ಇನ್ನೂ 660 ಪಿಎಸ್‌ಐ ನೇಮಕಾತಿ ಪರೀಕ್ಷೆಗಾಗಿ ಆರ್ಥಿಕ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಆ ಹುದ್ದೆಗಳಿಗು ನೇಮಕಾತಿ ಅಧಿಸೂಚನೆ ಹೊರ ಬೀಳಲಿದೆ ಎಂದರು.