ಬೆಂಗಳೂರು : ಅಸಘಂಟಿತ ವಲಯದ ಕಾರ್ಮಿಕರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಇ-ಶ್ರಮ್ ವಯೋಮಿತಿ 70 ಕ್ಕೆ ವರ್ಷ ಏರಿಕೆಗೆ ನಿರ್ಧರಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ ಸಂತೋಷ್ ಲಾಡ್, ಇ-ಶ್ರಮ್ ಯೋಜನೆಯಲ್ಲಿ ಹೆಸರು ನೋಂದಾಯಿಸುವ ಅಸಂಘಟಿತ ಕಾರ್ಮಿಕರ ವಯೋಮಿತಿಯನ್ನು ೫೯ ವರ್ಷದಿಂದ 70 ವರ್ಷಕ್ಕೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾರಿಗೆ ವ್ಯಾಪ್ತಿಗೆ ಬರುವ ಆಟೊ ಚಾಲಕರು, ಟೈರ್ ಅಂಗಡಿಯವರು, ಮೆಕ್ಯಾನಿಕ್, ಗ್ಯಾರೇಜ್ ಮಾಲೀಕರು ಸೇರಿದಂತೆ ಸುಮಾರು 40 ಲಕ್ಷ ಮಂದಿ ಅಸಂಘಟಿತ ಕಾರ್ಮಿಕರನ್ನು ‘ಇ-ಶ್ರಮ್’ ಯೋಜನೆಯಡಿ ತರಲು ಚಿಂತಸಲಾಗಿದೆ ಎಂದು ಹೇಳಿದ್ದಾರೆ.