ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಮಂಗಳವಾರ ರಿಲಯನ್ಸ್ ಜಿಯೋ ಮುಖ್ಯಸ್ಥ ಸ್ಥಾನದಿಂದ ಕೆಳಕ್ಕೆ ಇಳಿದಿದ್ದು, ಪುತ್ರ ಆಕಾಶ್ ಅಂಬಾನಿ ನೂತನ ಮುಖ್ಯಸ್ಥರಾಗಿದ್ದಾರೆ.
ಅಂಬಾನಿಯವರ ಪುತ್ರ ಆಕಾಶ್ ಅಂಬಾನಿಯವರನ್ನು ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂಸ್ಥೆಯು ಮಾಹಿತಿ ನೀಡಿದೆ.
ಜೂನ್ 27ರಿಂದ ಪಂಕಜ್ ಮೋಹನ್ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಜೂನ್ 27ರಂದು ನಡೆದ ಜಿಯೋ ಸಮಿತಿ ಸಭೆಯ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
ಇನ್ನು ಪಂಕಜ್ ಮೋಹನ್ ವ್ಯವಸ್ಥಾಪಕ ನಿರ್ದೇಶಕರಾಗಿ ಐದು ವರ್ಷಗಳ ಕಾಲ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸ್ವತಂತ್ರ ವ್ಯವಸ್ಥಾಪಕರಾಗಿ ಐದು ವರ್ಷಗಳ ಅವಧಿಗೆ ರಾಮಿಂದರ್ ಸಿಂಗ್ ಗುರ್ಜಲ್ ಹಾಗೂ ಕೆವಿ ಔಧರಿರನ್ನು ನೇಮಕ ಮಾಡಲಾಗಿದೆ. ಇದು ಕೂಡಾ ಜೂನ್ 27ರಿಂದ ಜಾರಿಗೆ ಬರಲಿದೆ.
ಆಕಾಶ್ ಅಂಬಾನಿ ಯಾರು?
ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಈ ಹಿಂದೆ ರಿಲಯನ್ಸ್ ಜಿಯೋ ನಾನ್ ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿದ್ದರು. ಈಗ ನೂತನ ಮುಖ್ಯಸ್ಥರಾಗಿ ಆಯ್ಕೆ ಆಗಿದ್ದಾರೆ. ಯುಎಸ್‌ನ ಬ್ರೌನ್ ಯೂನಿವರ್ಸಿಟಿಯಿಂದ ಅರ್ಥಶಾಸ್ತ್ರ ಪದವಿ ಪಡೆದಿರುವ ಆಕಾಶ್ ಅಂಬಾನಿ ಹೊಸ ತಂತ್ರಜ್ಞಾನ ಬೆಳವಣಿಗೆ ಕಾರ್ಯದಲ್ಲಿ ತೊಡಗಿಕೊಂಡರು. ಮುಂದಿನ ದಿನಗಳಲ್ಲಿ ತಂತ್ರಜ್ಞಾನವು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ ಎಂದು ಸಂಸ್ತೆಯು ಹೇಳಿಕೆಯಲ್ಲಿ ಉಲ್ಲೇಖ ಮಾಡಿದೆ.
ಇನ್ನು ಟಿಆರ್‌ಎಐ ಪ್ರಕಾರ ಭಾರತದ ಅತೀ ದೊಡ್ಡ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಏಪ್ರಿಲ್‌ನಲ್ಲಿ ಸುಮಾರು 16.8ರಷ್ಟು ಚಂದಾದಾರರನ್ನು ಹೊಂದಿದೆ.