Facebook Twitter Instagram
    Wednesday, July 29
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಲೆಗೈದ ಪತ್ನಿ..!
    ಇತ್ತೀಚಿನ ಸುದ್ದಿ

    ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಲೆಗೈದ ಪತ್ನಿ..!

    February 6, 2024
    Share

    ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯ ಎಪಿಎಂಸಿ-ಮಾರಡಗಿ ರೋಡ್‌ನಲ್ಲಿ ನಡೆದಿದೆ. ಕೊಲೆಮಾಡಿದ ಮಹಿಳೆ ಮಂಜುಳಾ ಹಾಗೂ ರಿಯಾಜ್ ಅಹ್ಮದ್, ಕೊಲೆಯಾದ ವ್ಯಕ್ತಿ (ಪತಿ) ಬಂಜಾರ ಕಾಲೋನಿ ನಿವಾಸಿ ಚಂದ್ರಶೇಖರ ಲಮಾಣಿ (40) ಕಳೆದ ಜನವರಿ 10 ರಂದು ಎಪಿಎಂಸಿ ಮಾರಡಗಿ ರೋಡ್‌ನಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ನವನಗರ ಪೊಲೀಸರು ಮೃತನಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದರು. ಅತ್ತ ಪತ್ನಿ ಮಂಜುಳಾ ಗಂಡನ ಸಾವಿನ ಬಗ್ಗೆ ಸಂಶಯ ಇದೆ ಎಂದು ನವನಗರ ಪೊಲೀಸ್ ಠಾಣೆಗೆ ತೆರಳಿ ದೂರು‌ ನೀಡಿದ್ದಳು‌. ಪೊಲೀಸರು ಎಲ್ಲಾ ಆ್ಯಂಗಲ್‌ನಲ್ಲಿ ತನಿಖೆ ಮಾಡಿದ್ದಾರೆ. ಬಳಿಕ ಈ ಕೊಲೆಗೆ ಕಾರಣ ಯಾರು ಎಂಬುದನ್ನ ಪತ್ತೆಹಚ್ಚಿದ್ದಾರೆ. ಪತಿ ಚಂದ್ರಶೇಖರ ಲಮಾಣಿಯನ್ನು ಪತ್ನಿ ಮಂಜುಳ ಮತ್ತು ಪ್ರಿಯಕರ ರಿಯಾಜ್ ಅಹ್ಮದ್ ಕೊಲೆ ಮಾಡಿದ್ದಾರೆ. ಅನೈತಿಕ ಸಂಬಂಧಕ್ಕೆ ವಿರೋಧ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಸತ್ಯ ಕಕ್ಕಿದ್ದಾರೆ. ನಮ್ಮಿಬ್ಬರ ಅನೈತಿಕ ಸಂಬಂಧ ಇತ್ತು. ಈ ವಿಷಯ ಗಂಡನಿಗೆ ಗೊತ್ತಾದ ನಂತರ ನನಗೆ ಕಿರುಕುಳ ನೀಡುತ್ತಿದ್ದ. ಅಲ್ಲದೇ ನಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರ ಕೊಲೆ ಮಾಡಿದ್ದಾಗಿ ಮಂಜುಳ ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದಾಳೆ. ಅತ್ತ ನಾನೇ ಚಂದ್ರಶೇಖರನನ್ನ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದೇನೆ. ಕಳೆದ ಐದು ವರ್ಷಗಳಿಂದ ನಮ್ಮಿಬ್ಬರ ನಡುವೆ ಅನೈತಿಕ ಸಂಬಂಧ ಇತ್ತು. ಅದಕ್ಕೆ ಚಂದ್ರಶೇಖರ ವಿರೋಧ ಮಾಡ್ತಾ ಇದ್ದ. ಆದ್ದರಿಂದ ಕೊಲೆ ಮಾಡದ್ದೇನೆ ಎಂದು ರಿಯಾಜ್ ಅಹ್ಮದ್ ನಿಜಾಂಶ ಹೇಳಿದ್ದಾನೆ. ಸದ್ಯ ಪತ್ನಿಯ ಅನೈತಿಕ ಸಂಬಂಧದಿಂದ ಗಂಡ ಕೊಲೆಯಾದ್ರೆ, ಮಾಡಬಾರದ ತಪ್ಪು ಮಾಡಿ ಪತ್ನಿ ಹಾಗೂ ಪ್ರಿಯಲ ಜೈಲು ಪಾಲಾಗಿದ್ದಾರೆ. ಇವರ ಈ ಕೃತ್ಯಕ್ಕೆ ಮೂರು ಮಕ್ಕಳು ಅನಾಥವಾಗಿವೆ.

    Post Views: 265

    Related Posts

    ಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ ಪರೀಕ್ಷೆ – ವಿದ್ಯಾರ್ಥಿಗೆ ಪಾಸಿಟಿವ್

    July 29, 2026

    ಒಮನ್ ನಲ್ಲಿ ಮೂಡಬಿದರೆಯ ಯುವಕ ಅಪಘಾತದಲ್ಲಿ ಮೃತ್ಯು

    July 29, 2026

    ದ್ವೇಷ ಭಾಷಣ: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಪ್ರಕರಣ ದಾಖಲು

    July 29, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ ಪರೀಕ್ಷೆ – ವಿದ್ಯಾರ್ಥಿಗೆ ಪಾಸಿಟಿವ್

    July 29, 2026

    ಒಮನ್ ನಲ್ಲಿ ಮೂಡಬಿದರೆಯ ಯುವಕ ಅಪಘಾತದಲ್ಲಿ ಮೃತ್ಯು

    July 29, 2026

    ದ್ವೇಷ ಭಾಷಣ: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಪ್ರಕರಣ ದಾಖಲು

    July 29, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.