ಮಂಗಳೂರು: ಅಕ್ರಮವಾಗಿ ಮೀನುಗಾರಿಕೆಯಲ್ಲಿ ನಿರತವಾಗಿದ್ದ ಆರೋಪದಲ್ಲಿ ಕರ್ನಾಟಕಕ್ಕೆ ಸೇರಿದ ಮೂರು ಬೋಟ್‌ಗಳನ್ನು ಕೇರಳ ಕರಾವಳಿ ಪೊಲೀಸರು ವಶಕ್ಕೆ ಪಡೆದು 7.5 ಲಕ್ಷ ರೂ. ದಂಡ ವಿಧಿಸಿದ್ದಾರೆ. ಕೇರಳ ಮೀನುಗಾರಿಕಾ ಇಲಾಖೆ ಹಾಗೂ ಕರಾವಳಿ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ ಸಮಯದಲ್ಲಿ ಅಕ್ರಮವಾಗಿ ಈ ಬೋಟ್‌ಗಳು ಟ್ರಾಲಿಂಗ್ ನಡೆಸಿದ್ದವು. ಕೇರಳ ಸಮುದ್ರ ಮೀನುಗಾರಿಕಾ ನಿಯಂತ್ರಣ ಕಾಯ್ದೆಯಂತೆ ಕ್ರಮ ತೆಗೆದು ಕೊಳ್ಳಲಾಗಿದೆ. ಬೋಟ್ ಮಾಲಕರಾದ ಗಣೇಶ್ ಪ್ರಸನ್ನ, ಶ್ರೀರಂಗ ಹಾಗೂ ಏಷ್ಯನ್ ಬ್ಲೂ ಬೋಟ್ ಗಳನ್ನು ಕುಂಬಳೆ ತೀರದಿಂದ 12 ನಾಟಿಕಲ್ ಮೈಲ್ ದೂರದಿಂದ ವಶಪಡಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲೂ ಕಾರ್ಯಾಚರಣೆ ಎಂದು ಮೀನುಗಾರಿಕಾ ಇಲಾಖಾ ನಿರ್ದೇಶಕ ಕೆ.ಎ.ಲಬೀಬ್ ತಿಳಿಸಿದ್ದಾರೆ.