ಬೆಂಗಳೂರು : ಇನ್ಮುಂದೆ ಸಿಗ್ನಲ್ ಜಂಪ್ ಮಾಡಿದರೆ ಹುಷಾರ್! ಇದನ್ನು ನಾವು ಹೇಳ್ತಾಯಿಲ್ಲ ಸಂಚಾರ ಪೊಲೀಸರೇ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನಿಮಯ ಉಲ್ಲಂಘಿಸಿ ತಪ್ಪಿಸಿಕೊಂಡು ಬಿಡಬಹುದು ಎಂದು ಖುಷಿ ಪಡುವವರಿಗೆ ಇದೊಂದು ಬಿಗ್ ಶಾಕ್.ಹೌದು… ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಾಲನೆ, ಹೆಲ್ಮೆಟ್ ಇಲ್ಲದೆ ಸವಾರಿ ಹೀಗೆ ಸಂಚಾರ ನಿಯಮ ಉಲ್ಲಘಿಸಿದ ಎರಡನೇ ನಿಮಿಷದಲ್ಲಿ ನಾಗರಿಕರ ಮುಬೈಲ್‌ಗೆ ದಂಡ ಪಾವತಿಸುವಂತೆ ಸಂದೇಶ ಬರಲಿದೆ.
ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ತ್ವರಿತ ಸಂದೇಶ ರವಾನಿಸುವ ಹೊಸ ವ್ಯವಸ್ಥೆಯನ್ನು ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗವು ಜಾರಿಗೊಳಿಸಿದೆ. ಇದಕ್ಕಾಗಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಸಂಚಾರ ಪೊಲೀಸರು ಅಳವಡಿಸಲಿದ್ದಾರೆ. ಆ ಕ್ಯಾಮೆರಾಗಳು ಸೆರೆಹಿಡಿದ ಫೋಟೋಗಳನ್ನು ಆಧರಿಸಿ ಎರಡು ನಿಮಿಷದಲ್ಲಿ ನಿಯಮ ಉಲ್ಲಂಘಿಸಿದವರಿಗೆ ಸಂದೇಶ ಕಳುಹಿಸಲಿದ್ದಾರೆ.ಈ ಸಂದೇಶದಲ್ಲಿ ಲಿಂಕ್ ಇರುತ್ತದೆ. ಅದರಲ್ಲಿ ಯಾವ ರೀತಿಯ ಸಂಚಾರ ನಿಯಮ ಉಲ್ಲಂಘನೆಯಾಗಿದೆ ಎಂಬ ಫೋಟೋ, ಮಾಹಿತಿ ಇರುತ್ತದೆ.
ಅಲ್ಲೇ ದಂಡ ಪಾವತಿಸಬಹುದು. ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ‘ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ತಕ್ಷಣವೇ ಮಾಹಿತಿ ನೀಡಿದರೆ ಜನರಿಗೂ ತಪ್ಪಿನ ಅರಿವಾಗಲಿದೆ. ಇದರಿಂದ ಆ ತಪ್ಪು ಪುನರಾವರ್ತನೆಗೆ ಕೂಡ ಕಡಿವಾಣ ಬೀಳಲಿದೆ. ಜನರಲ್ಲಿ ಸಹ ಸಂಚಾರ ಶಿಸ್ತು ಬರಬಹುದು’ ಎಂದರು.
ನೋಂದಣಿ ವೇಳೆ ನೀಡಿರುವ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ. ವಾಹನ ಮಾರಾಟ ಮಾಡಿದ್ದರೂ ಸಹ ಸಾರಿಗೆ ಇಲಾಖೆಯಲ್ಲಿ ಖರೀದಿದಾರನ ಮೊಬೈಲ್ ಸಂಖ್ಯೆ ನಮೂದಾಗಿದ್ದರೆ ಆತನಿಗೆ ಸಂದೇಶ ರವಾನೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಬೆಂಗಳೂರಿನಲ್ಲಿ ಕಷ್ಟವಾಹನಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಕ್ಷಣಾದರ್ದಲ್ಲಿ ಸಂದೇಶ ಕಳುಹಿಸಲು ತಡವಾಗುತ್ತಿದೆ ಎಂದು ಪೂರ್ವ ವಿಭಾಗದ (ಸಂಚಾರ) ಡಿಸಿಪಿ ಕುಲದೀಪ್ ಕುರ್ಮಾ ಆರ್ ಜೈನ್ ತಿಳಿಸಿದ್ದಾರೆ. ಈಗ ವಾಹನಗಳ ಮಾಲಿಕರ ಮೊಬೈಲ್ ಸಂಖ್ಯೆ ಸಂಗ್ರಹಕ್ಕೆ ವಿಮಾ ಕಂಪನಿಗಳ ನೆರವು ಕೋರಿದ್ದೇವೆ. ವಾಹನಗಳನ್ನು ಮಾರಾಟ ಮಾಡಿದರೂ ಪ್ರತಿ ವರ್ಷ ವಿಮೆ ನವೀಕರಣ ಮಾಡಬೇಕಾಗುತ್ತದೆ. ಆಗ ಸದರಿ ವಾಹನದ ಮಾಲಿಕ ನೀಡುವ ಮೊಬೈಲ್ ಸಂಖ್ಯೆಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವಂತೆ ವಿಮಾ ಕಂಪನಿಗಳಿಗೆ ಕೋರಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.