ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಛಾಯಾಗ್ರಾಹಕ ಕೊಂಚಾಡಿ ಸಾಗರ್ ದೇವಾಡಿಗ ಅವರ ಮತ್ತೊಂದು ಛಾಯಾಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಮಂಗಳೂರಿನಲ್ಲಿ ಛಾಯಾಗ್ರಾಹಕರಾಗಿ ಹೆಸರು ಮಾಡಿದ್ದ ಸಾಗರ್ ದೇವಾಡಿಗ ಅವರ ಛಾಯಚಿತ್ರಗಳಿಗೆ ಈ ಹಿಂದೆಯೂ ಹಲವು ಪ್ರಶಸ್ತಿ ಲಭಿಸಿತ್ತು. ಇದೀಗ ಅಂತಾರಾಷ್ಟ್ರೀಯು ಪ್ರಶಸ್ತಿ ಲಭಿಸಿದ್ದು, ಕೊಲ್ಕೊತ್ತಾದಲ್ಲಿ ನಡೆದ ಫಸ್ಟ್ ಲೈಟ್ ಅಂತಾರಾಷ್ಟ್ರೀಯ ಸಲೋನ್ 2024 ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಜಿಲ್ಲೆಯಲ್ಲಿ ಪ್ರಸಿದ್ದಿ ಪಡೆದಿರುವ ಕೊಡಿಯಾಲ್ ತೇರು ಉತ್ಸವದ ಅಪೂರ್ವ ಕ್ಷಣಗಳನ್ನು ಸಾಗರ್ ದೇವಾಡಿಗ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. ಇದು ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇದೀಗ ಚಿನ್ನದ ಪದಕ ಲಭಿಸಿದೆ. ಸಣ್ಣ ಪ್ರಾಯದಲ್ಲೇ ಛಾಯಾಗ್ರಹಣದಲ್ಲಿ ಅಮೊಘ ಸಾಧನೆ ಮಾಡಿರುವ ಸಾಗರ್ ದೇವಾಡಿಗ ಅವರ ಈ ಸಾಧನೆಗೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ