ಬೆಳ್ತಂಗಡಿ : ಪಶುವೈದ್ಯಕೀಯ ಚಿಕಿತ್ಸೆಯ ಅಂಬ್ಯುಲೆನ್ಸ್ ಚಾಲಕನ ಮೇಲೆ ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿಯ ಲಾಯಿಲಾ ಎಂಬಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಅಂಬ್ಯುಲೆನ್ಸ್ ಚಾಲಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಿದು ಘಟನೆ ?
ಬೆಳ್ತಂಗಡಿಯ ಪಶುವೈದ್ಯಕೀಯ ಅಂಬ್ಯುಲೆನ್ಸ್ ಸೇವೆ ಲಭ್ಯವಿಲ್ಲದ ಕಾರಣ ಕಡಬ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಅಂಬ್ಯುಲೆನ್ಸ್ ಬೆಳ್ತಂಗಡಿಗೆ ಆಗಮಿಸಿತ್ತು. ನೆರಿಯದಲ್ಲಿ ತುರ್ತು ಚಿಕಿತ್ಸೆ ನೀಡಲು ಸೈರನ್ ಮೊಳಗಿಸಿಕೊಂಡೇ ಬರುತ್ತಿದ್ದ ಅಂಬ್ಯುಲೆನ್ಸ್ ಗೆ ಲಾಯಿಲಾ ಬಳಿ ಬೆಂಗಳೂರಿನ ವಾಹನವೊಂದು ಅಡ್ಡ ಹಾಕಿದೆ.
ಬಳಿಕ ಚಾಲಕನ ಬಳಿಯ ಡೋರ್ ಓಪನ್ ಮಾಡಿ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಸೈರನ್ ಮೊಳಗಿಸಿದ್ರೂ ವಾಹನ ಸವಾರರು ಸೈಡ್ ನೀಡದ ಹಿನ್ನೆಲೆಯಲ್ಲಿ ಅಂಬ್ಯುಲೆನ್ಸ್ ಚಾಲಕ ಸನ್ನೆಯ ಮೂಲಕ ಸೈರನ್ ಮೊಳಗುವುದು ಕೇಳಿಸುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದ.
ಇದೇ ಕಾರಣಕ್ಕೆ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದ್ದು, ಆರೋಪಿಗಳ ಕಾರ್ ನಂಬರ್ ಆಧಾರದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.