Facebook Twitter Instagram
    Monday, June 15
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಪುಂಜಾಲಕಟ್ಟೆ: ಮತದಾನ ಬಹಿಷ್ಕಾರ ಫ್ಲೆಕ್ಸ್ ಅಳವಡಿಕೆ; ಕೋವಿ ಠೇವಣಿದಾರರಿಂದ ಎಚ್ಚರಿಕೆ …
    ಇತ್ತೀಚಿನ ಸುದ್ದಿ

    ಪುಂಜಾಲಕಟ್ಟೆ: ಮತದಾನ ಬಹಿಷ್ಕಾರ ಫ್ಲೆಕ್ಸ್ ಅಳವಡಿಕೆ; ಕೋವಿ ಠೇವಣಿದಾರರಿಂದ ಎಚ್ಚರಿಕೆ …

    April 22, 2024
    Share

    ಪುಂಜಾಲಕಟ್ಟೆ: ಚುನಾವಣೆಯ ಸಂದರ್ಭದಲ್ಲಿರೈ ತರು ತಮ್ಮ ಪರವಾನಗಿ ಹೊಂದಿದ ಕೋವಿಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿರಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದ ವಿರುದ್ಧ ಬಂಟ್ವಾಳ ತಾಲೂಕಿನ ರೈತರೋರ್ವರು ಚುನಾವಣಾ ಮತ ಬಹಿಷ್ಕಾರಕ್ಕೆ ಕರೆ ನೀಡಿ‌ ಪ್ಲೆಕ್ಸ್ ಅಳವಡಿಸಿದ್ದಾರೆ.

    ಕೃಷಿಕರ ಕೋವಿಯನ್ನು ಪ್ರತಿ ಸಲ ಚುನಾವಣಾ ಸಮಯದಲ್ಲಿ ಪೊಲೀಸ್ ಠಾಣೆಯಲ್ಲಿಡುವುದರಿಂದ ಪ್ರಾಣಿಗಳ ಹಾವಳಿಗೆ ತುತ್ತಾಗಿ ಕೃಷಿ ನಷ್ಟಕ್ಕೆ ಒಳಗಾಗುತ್ತಿದೆ. ಹೀಗಾಗಿ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಮತ್ತು ತೆಂಕಕಜೆಕಾರು ಗ್ರಾಮದ ಎಲ್ಲಾ ಅಪರಾಧ ಇಲ್ಲದ ಕೋವಿ ಬಳಕೆದಾರರು ಚುನಾವಣಾ ಮತ ಬಹಿಷ್ಕರಿಸುವಂತೆ ವಿನಂತಿಸಿ ಬಂಟ್ವಾಳ ತಾ.ಪಂ.ಮಾಜಿ ಅಧ್ಯಕ್ಷರಾದ ಕೆ.ಎ.ಸತೀಶ್ಚಂದ್ರ ಹೊಸಮನೆ ಅವರು ಕೋವಿ ಬಳಕೆದಾರರ ಪರವಾಗಿ ಪ್ಲೆಕ್ಸ್ ಅಳವಡಿಸಿ ಎಚ್ಚರಿಕೆ ನೀಡಿದ್ದಾರೆ.ಬಂಟ್ವಾಳ ತಾಲೂಕಿನಲ್ಲು ಹಲವಾರು‌ ಮಂದಿ ಕೃಷಿಕರು‌ ಪರವಾನಿಗೆಯುಳ್ಳ ಕೋವಿಯನ್ನು ಹೊಂದಿದ್ದು, ಜಿಲ್ಲಾಧಿಕಾರಿಯವರ ಆದೇಶದಂತೆ ಬಂಟ್ವಾಳ ನಗರ ಮತ್ತು ಗ್ರಾಮಾಂತರ, ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರವಾನಿಗೆ ಹೊಂದಿರುವ ರೈತರು ಚುನಾವಣೆಯ ಹಿನ್ನಲೆಯಲ್ಲಿ ಈಗಾಗಲೇ ತಮ್ಮ ಕೋವಿಯನ್ನು ಡೆಪಾಸಿಟ್ ಇರಿಸಿರುವುದು‌ ಇಲ್ಲಿ‌ ಗಮನಾರ್ಹ ಅಂಶವಾಗಿದೆ. ಕೋವಿ ಠೇವಣಾತಿ ವಿನಾಯಿತಿಗಾಗಿ ಜಿಲ್ಲಾಧಿಕಾರಿ ನೇತೃತ್ವದ ಸ್ಟೀನಿಂಗ್ ಕಮಿಟಿಗೆ ಅರ್ಜಿ ಸಲ್ಲಿಸಿದ ಹಾಗೂ ಹೈಕೋರ್ಟ್ ಮೆಟ್ಟಿಲೇರಿದ್ದ ಸುಳ್ಯ ಮತ್ತು ಕಡಬದ ಸುಮಾರು 197 ರೈತರಿಗೆ ವಿನಾಯಿತಿ ನೀಡಿ ಸ್ಟೀನಿಂಗ್ ಕಮಿಟಿ ಮತ್ತು ಹೈಕೋರ್ಟ್ ಆದೇಶಿಸಿದೆ. ಆದರೆ ಬಂಟ್ವಾಳ ಪರಿಸರದ ಕೋವಿ ಹೊಂದಿದ ರೈತರು‌ ಯಾರು ಕೂಡ ವಿನಾಯಿತಿ ಕೋರಿ ನ್ಯಾಯಾಲಯದ ಮೋರೆ ಹೋದ ಬಗ್ಗೆ ಸ್ಪಷ್ಟತೆ‌ ಇಲ್ಲ. ಇದೀಗ ಬಂಟ್ವಾಳ ಪರವಾನಿಗೆ ಹೊಂದಿರುವ ಕೋವಿದಾರರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

    Post Views: 247

    Related Posts

    MCC ಬ್ಯಾಂಕ್‌ನಲ್ಲಿ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ – 2026

    June 15, 2026

    ಪಿಕಪ್ ಪಲ್ಟಿ; ಅಕ್ರಮ ಜಾನುವಾರು ಸಾಗಾಟ ಬಯಲು – ಇಬ್ಬರ ವಿರುದ್ಧ ಪ್ರಕರಣ ದಾಖಲು

    June 15, 2026

    ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವಕನಿಗೆ ಹೊಸ ಬದುಕು; ಕುಟುಂಬದೊಂದಿಗೆ ಪುನರ್ಮಿಲನ

    June 15, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    MCC ಬ್ಯಾಂಕ್‌ನಲ್ಲಿ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ – 2026

    June 15, 2026

    ಪಿಕಪ್ ಪಲ್ಟಿ; ಅಕ್ರಮ ಜಾನುವಾರು ಸಾಗಾಟ ಬಯಲು – ಇಬ್ಬರ ವಿರುದ್ಧ ಪ್ರಕರಣ ದಾಖಲು

    June 15, 2026

    ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವಕನಿಗೆ ಹೊಸ ಬದುಕು; ಕುಟುಂಬದೊಂದಿಗೆ ಪುನರ್ಮಿಲನ

    June 15, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.