Facebook Twitter Instagram
    Thursday, April 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»Uncategorized»ಭಾರೀ ಮಳೆ: ಕಾಸರಗೋಡಿನ ಮಧೂರು ದೇಗುಲ ಜಲಾವೃತ
    Uncategorized

    ಭಾರೀ ಮಳೆ: ಕಾಸರಗೋಡಿನ ಮಧೂರು ದೇಗುಲ ಜಲಾವೃತ

    July 6, 2022
    Share

    ಮಹಾ ಮಳೆ ನಕ್ಷತ್ರಗಳಲ್ಲಿ ಎರಡನೆಯದಾದ ಪುನರ್ವಸು ಆರಂಭದ ಮುನ್ನಾದಿನ ಮಂಗಳವಾರ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ.

    ಬೆಳಗ್ಗೆ ಆರಂಭವಾದ ಮಳೆ ದಿನಪೂರ್ತಿ ಬಿಡದೆ ಸುರಿದಿದೆ. ನದಿ, ಹೊಳೆಗಳು ಉಕ್ಕಿ ಹರಿದಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ.

    ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇಗುಲದ ಅಂಗಣಕ್ಕೆ ಮಧು ವಾಹಿನಿ ನದಿಯ ಪ್ರವಾಹ ಪ್ರವೇಶಿಸಿತ್ತು. ಉಡುಪಿ ಜಿಲ್ಲೆಯ ಮಾರಣಕಟ್ಟೆ, ಕಮಲಶಿಲೆ ದೇಗುಲಗಳೂ ಜಲಾವೃತಗೊಂಡಿದ್ದವು. ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಗೆ ಅಪಾಯ ಉಂಟಾಗಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ. ಕಲ್ಲಡ್ಕ – ಕಾಂಞಂಗಾಡ್‌ ಅಂತಾರಾಜ್ಯ ಹೆದ್ದಾರಿಯಲ್ಲಿಯೂ ಸಾರಡ್ಕ ಬಳಿ ಗುಡ್ಡ ಕುಸಿದು ಸಂಚಾರ ಸ್ವಲ್ಪ ಕಾಲ ಸ್ಥಗಿತಗೊಂಡಿತ್ತು.

    ಉಡುಪಿ -ಶಿವಮೊಗ್ಗ ಸಂಪರ್ಕಿಸುವ ರಾ.ಹೆ. 169 ಎ ರಸ್ತೆಯ ಹೆಬ್ರಿ ಸೀತಾನದಿ ಬಳಿ ನೆರೆನೀರು ರಸ್ತೆಯ ಮೇಲೆ ಉಕ್ಕಿ ಹರಿದು ಒಂದು ತಾಸು ಕಾಲ ಸಂಚಾರ ಬಂದ್‌ ಆಗಿತ್ತು. ಭಾರೀ ಮಳೆಯಿಂದಾಗಿ ಆಗುಂಬೆ, ಬಾಳೆಬರೆ ಸಹಿತ ಘಾಟಿ ರಸ್ತೆಗಳು ಜರ್ಝರಿತಗೊಂಡಿವೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ಮನೆಗಳಿಗೆ ಪೂರ್ಣ ಹಾನಿ; 15 ಭಾಗಶಃ ಹಾನಿಯಾಗಿದೆ. ಜಿಲ್ಲೆಯಲ್ಲಿ ಮೆಸ್ಕಾಂಗೆ ಅಂದಾಜು 51 ಲಕ್ಷ ರೂ. ನಷ್ಟ ಉಂಟಾಗಿದೆ. ಮಂಗಳೂರಿನಲ್ಲಿ ಮೋರ್ಗನ್ಸ್‌ ಗೇಟ್‌ ಸಮೀಪ ತಡೆಗೋಡೆ ಮನೆ ಮೇಲೆ ಕುಸಿದು ಐವರಿಗೆ ಗಾಯಗಳಾಗಿವೆ.

    ಕರಾವಳಿ ಪ್ರದರ್ಶನ ಮೈದಾನ ಮುಂಭಾಗ ಬೃಹತ್‌ ಮರ ಬಿದ್ದು ವಿದ್ಯುತ್‌ ಕಂಬ ಧರಾಶಾಯಿಯಾಗಿ, ಸ್ಕೂಟರ್‌ ಜಖಂಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ವಿವಿಧೆಡೆ ವಿದ್ಯುತ್‌ ಕಂಬಗಳು, ಟ್ರಾನ್ಸ್‌ ಫಾರ್ಮರ್‌, ತಂತಿ ಗಳಿಗೆ ಹಾನಿ ಉಂಟಾಗಿದ್ದು, 68.69 ಲ.ರೂ. ನಷ್ಟವಾಗಿದೆ. ಮೂಳೂರು ತೊಟ್ಟಂ, ಮರವಂತೆ, ಉಳ್ಳಾಲ ಪರಿಸರಗಳಲ್ಲಿ ಕಡಲ್ಕೊರೆತ ತೀವ್ರವಾಗಿತ್ತು. ಅನೇಕ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ತೊಂದರೆ ಅನುಭವಿಸಿದರು.

    ಮಧೂರು ದೇಗುಲ ಜಲಾವೃತ :

    ಕಾಸರಗೋಡು: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಮಧುವಾಹಿನಿ ನದಿಯ ಪ್ರವಾಹವು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಂಗಣದಲ್ಲಿ ಉಕ್ಕಿ ಹರಿಯಿತು.

    Post Views: 223

    Related Posts

    ಕಾಪು: ಸ್ಕೂಟಿಗೆ ಬಸ್ ಡಿಕ್ಕಿ- ಬಾಲಕಿ ಸಾವು

    April 22, 2026

    ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ- ಮೆಸ್ಕಾಂ ಸಿಬ್ಬಂದಿ ಮೃತ್ಯು

    March 25, 2026

    ಏಪ್ರಿಲ್ 1, 2026 ರಿಂದ ಟೋಲ್ ದರ ಏರಿಕೆ: ₹3,000 ದಿಂದ ₹3,075 ಗೆ ವಾರ್ಷಿಕ ಪಾಸ್?

    March 14, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.