Facebook Twitter Instagram
    Saturday, April 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಶಾಸಕ‌ ಹರೀಶ್ ಪೂಂಜ ಪೊಲೀಸ್ ಠಾಣೆಗೆ‌ ಹಾಜರು : ಜಾಮೀನಿನಲ್ಲಿ ಬಿಡುಗಡೆ
    ಇತ್ತೀಚಿನ ಸುದ್ದಿ

    ಶಾಸಕ‌ ಹರೀಶ್ ಪೂಂಜ ಪೊಲೀಸ್ ಠಾಣೆಗೆ‌ ಹಾಜರು : ಜಾಮೀನಿನಲ್ಲಿ ಬಿಡುಗಡೆ

    May 23, 2024
    Share

    ಬೆಳ್ತಂಗಡಿ: ಪೊಲೀಸರು ನೋಟಿಸ್‌ ನೀಡಿದ ವಿಚಾರದಲ್ಲಿ ಶಾಸಕ ಹರೀಶ್‌  ಪೂಂಜ ರಾತ್ರಿ 9.30ಕ್ಕೆ ಠಾಣೆಗೆ ಹಾಜ ರಾದರು. ಬಳಿಕ ಬೆಳ್ತಂಗಡಿ ಠಾಣಾ 58/2024, ಕಲಂ: 143, 147, 341, 504, 506 ಜತೆಗೆ 149 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್‌ ಪೂಂಜರನ್ನು ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಶನ್‌ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿರುತ್ತದೆ ಎಂದು ಠಾಣೆಯ ಮೂಲಗಳಿಂದ ತಿಳಿದು ಬಂದಿದೆ.

    ವಿಚಾರಣೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಸುನಿಲ್‌ ಕುಮಾರ್‌, ಶಾಸಕರ ಬಂಧನ ಯತ್ನ ಅತ್ಯಂತ ಖಂಡನೀಯ. ಪಾಕಿಸ್ಥಾನಕ್ಕೆ ಜಿಂದಾಬಾದ್‌ ಹಾಕಿದವನಿಗೆ ನೋಟಿಸ್‌ ನೀಡಲು 4 ದಿನ ತೆಗೆದುಕೊಂಡವರು ಓರ್ವ ಜನಪ್ರತಿನಿಧಿಯ ಬಂಧನ ಹುನ್ನಾರ ಕಂಡಾಗ ರಾಜ್ಯ ಯಾವ ಪ್ರಜಾಪ್ರಭುತ್ವದಲ್ಲಿದೆ ಎಂಬ ಪ್ರಶ್ನೆ ಮೂಡುತ್ತದೆ. ನಾವೆಲ್ಲ ಶಾಸಕರು ಈ ಪ್ರಕರಣ ತಾರ್ಕಿಕ ಹಂತ ಕಾಣುವವರೆಗೆ ನಾವು ಬಿಡುವುದಿಲ್ಲ. ನಾಳೆ ನಾಡಿದ್ದರಲ್ಲಿ ಗೃಹಸಚಿವರನ್ನು ಭೇಟಿಯಾಗಿ ಉತ್ತರ ಕೇಳುತ್ತೇವೆ.ರಾಜಕೀಯ ಹುನ್ನಾರವಾದರೆ ವಿಧಾನಸಭೆ ನಡೆಸಲು ಬಿಡುವುದಿಲ್ಲ. ಶಾಸಕರು ಸೌಜನ್ಯದಿಂದ ವರ್ತಿಸಿದರೂ ಪೊಲೀಸರು ಗೂಂಡಾ ವರ್ತನೆ ತೋರಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    Post Views: 213

    Related Posts

    ಭಾರತದ ನಕ್ಷೆಯಲ್ಲಿ ಮಹತ್ವದ ಬದಲಾವಣೆ: ರಾಜ್ಯ ರಾಜಧಾನಿಗೆ ಸಂಸತ್ತಿನ ಕಾನೂನು ಮಾನ್ಯತೆ

    April 24, 2026

    ಪಾತ್ರೆಯಲ್ಲಿ ಸಿಲುಕಿದ ಪುಟ್ಟ ಮಗು: ಪೊಲೀಸರ ಸಮಯೋಚಿತ ರಕ್ಷಣಾ ಕಾರ್ಯಕ್ಕೆ ಶ್ಲಾಘನೆ

    April 24, 2026

    ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು

    April 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.