ಸುಳ್ಯ: ಭಾರೀ ಶಬ್ದದೊಂದಿಗೆ ಇಂದು ಬೆಳ್ಳಂ ಬೆಳಗ್ಗೆ ಮತ್ತೆ ಭೂಮಿ ಕಂಪಿಸಿದ ಘಟನೆ ಸಂಪಾಜೆ ಹಾಗು ಸಮೀಪದ ಪ್ರದೇಶ, ಅರಂತೋಡು, ತೊಡಿಕಾನ, ಸೇರಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಗಡಿ ಪ್ರದೇಶಗಳಾದ ಚೆಂಬು, ಕಲ್ಲಪಳ್ಳಿ ಭಾಗದಲ್ಲಿ ಜನರ ಅನುಭವಕ್ಕೆ ಬಂದಿದೆ.
ಹೌದು ಜೂ.10 ರಂದು ಬೆಳಿಗ್ಗೆ 6.23ಕ್ಕೆ ವೇಳೆಗೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ ಎಂದು ಜನ ತಮ್ಮ ಅನುಭವವನ್ನು ದೂರವಾಣಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಕಲ್ಲಪಳ್ಳಿ ಭಾಗದಲ್ಲಿ ಸ್ವಲ್ಪ ಹೆಚ್ಚು ತೀವ್ರತೆ ಇರುವಂತೆ ಭಾರೀ ಶಬ್ದದೊಂದಿಗೆ ಭೂ ಕಂಪನದ ಅನುಭವ ಆಯಿತು ಎಂದು ಹಲವರು ಹೇಳಿದ್ದಾರೆ.
ವಾರದ ಬಳಿಕ ಇದೀಗ ಮತ್ತೆ ಭೂಮಿ ನಡುಗಿದೆ. ಜೂ.25 ಮತ್ತು ಜುಲೈ 1 ರ ನಡುವೆ ಹಲವು ದಕ್ಷಿಣ ಕನ್ನಡ ಹಾಗು ಕೊಡಗಿನ ಗಡಿ ಭಾಗದಲ್ಲಿ ಭಾರೀ ಶಬ್ದದೊಂದಿಗೆ ಲಘು ಭೂ ಕಂಪನ ಉಂಟಾಗಿತ್ತು. ಇದೀಗ ಭೂಮಿ ಮತ್ತೆ ಕಂಪಿಸಿದ್ದು ಜನರ ಆತಂಕ ಹೆಚ್ಚಿದೆ.