ಮುಂಬೈ: ಅಪ್ಪಂದಿರ ದಿನದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿಯವರು ತಮ್ಮ ತಂದೆ ವೀರಪ್ಪ ಶೆಟ್ಟಿಯವರ ಬಗ್ಗೆ ಭಾವನಾತ್ಮಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ’ಆಗ ಅವರ ವಯಸ್ಸು 9, ಚಿಕ್ಕ ವಯಸ್ಸಿನಲ್ಲೇ ಮಂಗಳೂರು ಬಿಟ್ಟು ಮುಂಬೈಗೆ ಓಡಿ ಬಂದ ನನ್ನ ಅಪ್ಪ ದಕ್ಷಿಣ ಭಾರತದ ಹೋಟೆಲ್ ವೊಂದರಲ್ಲಿ ಟೇಬಲ್ ಕ್ಲೀನರ್ ಆಗಿ ಕೆಲಸ ಆರಂಭಿಸಿದ್ದರು. ಆಗ ಅಪ್ಪ ಕೆಲಸ ಮಾಡ್ತಿದ್ದ ಮೂರು ಹೋಟೆಲ್‌ಗಳಿಗೆ ಇಂದು ನಾನು ಮಾಲೀಕನಾಗಿದ್ದೇನೆ ಮಂಗಳೂರು ಮೂಲದ ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ತಮ್ಮ ತಂದೆಯ ಬಗ್ಗೆ ಹಂಚಿಕೊಂಡಿದ್ದಾರೆ. ಚಿಕ್ಕವಯಸ್ಸಿನಲ್ಲೇ ನನ್ನ ಅಪ್ಪನ ತಂದೆ ಮರೆಯಾಗಿದ್ದು, ಕುಟುಂಬಕ್ಕೆ ಆಸರೆಯಾಗಿದ್ದರು. 9ನೇ ವಯಸ್ಸಿನಲ್ಲೇ ಮುಂಬೈಗೆ ಓಡಿ ಬಂದ ನನ್ನ ತಂದೆ ಮೊದಲಿಗೆ ದಕ್ಷಿಣ ಭಾರತದ ಹೋಟೆಲ್‌ವೊಂದರಲ್ಲಿ ಟೇಬಲ್ ಕ್ಲೀನರ್ ಆಗಿ ಕೆಲಸಕ್ಕೆ ಸೇರಿಕೊಂಡರು. ನಮ್ಮ ಸಮುದಾಯದಲ್ಲಿ ಆಗ ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡ್ತಾ ಇದ್ದರು. ಹೀಗಾಗಿ ಹೋಟೆಲ್‌ನಲ್ಲಿ ಕ್ಲೀನರ್ ಆಗಿ ಕೆಲಸ ಸಿಕ್ಕಿತ್ತು. ಹೋಟೆಲ್ ಕೆಲಸ ಅಲ್ಲೇ ಕೆಲಸ ಮುಗಿಸಿ ಗೋಣಿ ಚೀಲ ಹಾಸಿಕೊಂಡು ಮಲಗುತ್ತಿದ್ದರು. ಹೋಟೆಲ್ ಉದ್ಯಮದಲ್ಲೇ ಕ್ಲೀನರ್ ನಿಂದ ಹಂತ ಹಂತವಾಗಿ ಮೇಲೇರಿದ ನನ್ನ ತಂದೆ, ಬಳಿಕ ಅದೇ ಹೋಟೆಲ್‌ನ ಮ್ಯಾನೇಜರ್ ಆದರು. ಅಷ್ಟೇ ಅಲ್ಲ, ತಾವು ಕೆಲಸ ಮಾಡಿದ ಮೂರು ಹೊಟೇಲ್‌ಗಳ ಮಾಲೀಕರು ನಿವೃತ್ತರಾದ ಮೇಲೆ, ಅವೆಲ್ಲವುಗಳನ್ನೂ ಖರೀದಿ ಮಾಡಿದರು. ಈಗ ನಾನು ಈ ಮೂರು ಹೋಟೆಲ್‌ಗಳನ್ನು ಮುನ್ನಡೆಸುತ್ತಿದ್ದು, ಮೂರು ಹೊಟೇಲ್‌ಗಳ ಮಾಲೀಕನಾಗಿ ಅವರ ಆದರ್ಶದಂತೆಯೇ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದಿದ್ದಾರೆ.