ಮಂಗಳೂರು ನಗರದ ದೇರೆಬೈಲಿನಲ್ಲಿ ಕೃಷ್ಣರಾಜ ಮಯ್ಯ ನೇತೃತ್ವದ ಆಶೀರ್ವಾದ್ ಇನ್ಫ್ರಾಸ್ಟ್ರಕ್ಚರ್ ಕಂಪನಿ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ದ್ವಾರಕಾ ಎನ್ ಕ್ಲೇವ್ ಎಂಬ ವಸತಿ ಹಾಗೂ ವಾಣಿಜ್ಯ ಕಟ್ಟಡವು 2017ನೇ ಇಸವಿಯಲ್ಲಿ ಆರಂಭವಾಗಿ 2019 ಡಿಸೆಂಬರ್ ನಲ್ಲಿ ಕಟ್ಟಡ ಪೂರ್ಣಗೊಳಿಸುವುದಾಗಿ ಗ್ರಾಹಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇಂದಿನ ದಿನಗಳವರೆಗೂ ಕಟ್ಟಡ ಪೂರ್ಣಗೊಂಡಿಲ್ಲ. ಪ್ರತಿ ಬಾರಿಯೂ ಗ್ರಾಹಕರು ಈ ಬಗ್ಗೆ ವಿಚಾರಿಸಿದಾಗ ಬಿಲ್ಡರ್ ಕೃಷ್ಣರಾಜ ಮಯ್ಯ ಅವರು ಇನ್ನೂ ಎರಡು ಮೂರು ತಿಂಗಳುಗಳಲ್ಲಿ ಪೂರ್ಣಗೊಳಿಸುವುದಾಗಿ ಆಶ್ವಾಸನೆ ನೀಡುತ್ತಾ ಬಂದಿದ್ದರು.
ಈ ಬಗ್ಗೆ ಮನನೊಂದ 5 ಮಂದಿ ಗ್ರಾಹಕರು ಸೂಕ್ತದ ದಾಖಲೆಗಳೊಂದಿಗೆ ರೇರದ ಮೊರೆ ಹೋದರು ಈ ಬಗ್ಗೆ ವಿಚಾರಣೆ ನಡೆಸಿದ ರೇರ ಮೂವರು ಅರ್ಜಿದಾರರಾದ ಹರ್ಷ, ದಿನೇಶ್ ರವರಿಗೆ ರೂ 9,07,691, ಜೀತನ್ ದಿಕ್ಕುನ್ನ ರವರಿಗೆ ರೂ 10,07,939 ಹಾಗೂ ಕೃಷ್ಣರಾಜ ಸಾಲಿಯಾನ್ ರವರಿಗೆ ರೂ 651614 ಪರಿಹಾರವನ್ನು 60 ದಿನಗಳ ಒಳಗೆ ಪಾವತಿಸುವಂತೆ ಮತ್ತು ಕಟ್ಟಡವನ್ನು 60 ದಿನ ಒಳಗೆ ಪೂರ್ಣಗೊಳಿಸುವಂತೆ ಆದೇಶಿಸಿದೆ. ಇನ್ನು ಇಬ್ಬರು ಅರ್ಜಿದಾರರಾದ ಸುಪ್ರೀತ್ ಹಾಗೂ ಅಭಿಷೇಕ್ ಪೂಜಾರಿಯವರ ಅರ್ಜಿ ವಿಚಾರಣೆ ಹಂತದಲ್ಲಿದ್ದು ಶೀಘ್ರದಲ್ಲಿ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ರೇರದ ಈ ಆದೇಶ ಮಂಗಳೂರು ನಗರದಲ್ಲಿ ಮೊದಲ ಪ್ರಕರಣ ಎನ್ನಲಾಗಿದೆ.