Facebook Twitter Instagram
    Monday, June 15
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ವಿಟ್ಲ: ಮಹಿಳೆಯ ಕತ್ತು ಹಿಸುಕಿ ಪ್ರಜ್ಞಾಹೀನರಾದ ಬಳಿಕ ಚಿನ್ನದ ಕಿವಿಯೋಲೆ ಕಳವು
    ಇತ್ತೀಚಿನ ಸುದ್ದಿ

    ವಿಟ್ಲ: ಮಹಿಳೆಯ ಕತ್ತು ಹಿಸುಕಿ ಪ್ರಜ್ಞಾಹೀನರಾದ ಬಳಿಕ ಚಿನ್ನದ ಕಿವಿಯೋಲೆ ಕಳವು

    July 8, 2024
    Share

    ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಬಲಿಪಗುಳಿ ಎಂಬಲ್ಲಿ ಕಳ್ಳತನ ನಡೆದಿದೆ. ವಿದೇಶದಲ್ಲಿರುವ ಸುಲೈಮಾನ್ ಎಂಬವರ ಮನೆಯ ಮಹಡಿಯ ಕಿಟಕಿ ಸರಳು ತುಂಡರಿಸಿ ಬಾಗಿಲಿನ ಮೂಲಕ ಒಳನುಗ್ಗಿದ ಕಳ್ಳರಿಂದ ದುಷ್ಕೃತ್ಯ ನಡೆದಿದೆ. ಕೋಣೆಯೊಳಗೆ ನಿದ್ರಿಸಿದ್ದ ವೃದ್ಧೆ ಐಸಮ್ಮಾ(72) ಅವರ ಕತ್ತು ಹಿಸುಕಿ ಪ್ರಜ್ಞಾಹೀನರಾದ ಬಳಿಕ ಕಿವಿಯಲ್ಲಿದ್ದ ಹಿಂದಿನ ಕಾಲದ ಚಿನ್ನದ ಕಿವಿಯೋಲೆಗಳನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ. ಮನೆಯ ಇನ್ನೊಂದು ಕೋಣೆಯಲ್ಲಿ ಮಕ್ಕಳೊಂದಿಗೆ ಮಲಗಿದ್ದ ಐಸಮ್ಮಾ ಅವರ ಸೊಸೆ ಬೆಳಗ್ಗೆ ಎದ್ದು ಅತ್ತೆಯನ್ನು ಎಚ್ಚರಿಸಲು ಬಂದಾಗ ಐಸಮ್ಮಾ ಪ್ರಜ್ಞಾಹೀನರಾಗಿ ಬಿದ್ದುಕೊಂಡಿದ್ದರು. ಪಾರ್ಶ್ವವಾಯು ಬಡಿದಿರಬೇಕೆಂದು ಶಂಕಿಸಿದ ಮನೆಯವರು ನೆರೆಯ ಸಂಬಂಧಿಕರಿಗೆ ಮಾಹಿತಿ ನೀಡಿದರು. ಅವರೆಲ್ಲ ಬಂದು ನೋಡಿದಾಗ ಕಿಟಕಿಯ ಸರಳು ತುಂಡರಿಸಿರುವುದು ಮತ್ತು ಮಹಡಿಯ ಬಾಗಿಲು ತೆರೆದಿರುವುದು ಕಂಡುಬಂದಿತ್ತು. ಆತಂಕಗೊಂಡ ಮನೆಯವರು ಮತ್ತಷ್ಟು ಪರಿಶೀಲಿಸಿದಾಗ ವೃದ್ಧೆಯ ಕಿವಿಯೋಲೆಗಳು ಕಳ್ಳತನ ಆಗಿರುವುದು ಸ್ಪಷ್ಟವಾಯಿತು. ಬಳಿಕ ಮಾಹಿತಿ ನೀಡಿ ವಿಟ್ಲ ಪೊಲೀಸರು ಮತ್ತು ಶ್ವಾನದಳ ಆಗಮಿಸಿದೆ. ವೃದ್ಧೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಲೈಮಾನ್ ಸಹೋದರ ಇಬ್ರಾಹಿಂ ನೀಡಿದ ದೂರಿನಂತೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 116/2024 ಕಲಂ:331(4),305 BNS ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

    Post Views: 205

    Related Posts

    MCC ಬ್ಯಾಂಕ್‌ನಲ್ಲಿ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ – 2026

    June 15, 2026

    ಪಿಕಪ್ ಪಲ್ಟಿ; ಅಕ್ರಮ ಜಾನುವಾರು ಸಾಗಾಟ ಬಯಲು – ಇಬ್ಬರ ವಿರುದ್ಧ ಪ್ರಕರಣ ದಾಖಲು

    June 15, 2026

    ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವಕನಿಗೆ ಹೊಸ ಬದುಕು; ಕುಟುಂಬದೊಂದಿಗೆ ಪುನರ್ಮಿಲನ

    June 15, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    MCC ಬ್ಯಾಂಕ್‌ನಲ್ಲಿ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ – 2026

    June 15, 2026

    ಪಿಕಪ್ ಪಲ್ಟಿ; ಅಕ್ರಮ ಜಾನುವಾರು ಸಾಗಾಟ ಬಯಲು – ಇಬ್ಬರ ವಿರುದ್ಧ ಪ್ರಕರಣ ದಾಖಲು

    June 15, 2026

    ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವಕನಿಗೆ ಹೊಸ ಬದುಕು; ಕುಟುಂಬದೊಂದಿಗೆ ಪುನರ್ಮಿಲನ

    June 15, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.