ಮಂಗಳೂರು;ಹ್ಯಾರಿಸ್ ಎಂಬವರಿಗೆ ಸೇರಿದ 17 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ವಶಪಡಿಸಿಕೊಂಡ ಇ.ಡಿ. ಅಧಿಕಾರಿಗಳು
ಮಂಗಳೂರು; ಮಂಗಳೂರಿನ ಕೆ ಮೊಹಮ್ಮದ್ ಹ್ಯಾರಿಸ್ ಹೆಸರಿನಲ್ಲಿದ್ದ 17.34 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999 ರ ಅಡಿಯಲ್ಲಿ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.
ವಶಪಡಿಸಿಕೊಂಡ ಆಸ್ತಿಗಳಲ್ಲಿ ಮಂಗಳೂರಿನಲ್ಲಿರುವ ಎರಡು ವಸತಿ ಮನೆಗಳು ಮತ್ತು ಒಂದು ಕೈಗಾರಿಕಾ ಪ್ಲಾಟ್ ಸೇರಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಅಧಿಕಾರಿಗಳು ಫೆಮಾ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಮಾಡಿದ್ದಾರೆ. ಮಂಗಳೂರಿನ ನಿವಾಸಿ ಮುಕ್ಕಾ ಗ್ರೂಪ್ ಆಫ್ ಕಂಪನೀಸ್‌ನ ಹ್ಯಾರಿಸ್ ಅವರು ನಿಬಂಧನೆಗಳನ್ನು ಉಲ್ಲಂಘಿಸಿ ಸ್ಥಿರ ಆಸ್ತಿ, ವ್ಯಾಪಾರ ಘಟಕಗಳನ್ನು ಸಂಪಾದಿಸಿದ್ದಾರೆ ಮತ್ತು ಭಾರತದ ಹೊರಗೆ ವಿದೇಶೀ ವಿನಿಮಯ ವಹಿವಾಟು ನಡೆಸಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಇದೀಗ ಅವರ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಂಸ್ಥೆ ಹೇಳಿರುವ ಬಗ್ಗೆ ವರದಿಯಾಗಿದೆ.