Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕುಂಬಳೆ: ತರವಾಡು ಮನೆಗೆ ನುಗ್ಗಿದ ಕಳ್ಳರು : ಹಣ, ಚಿನ್ನಾಭರಣ, ಬೆಳ್ಳಿ, ತಾಮ್ರ ಮತ್ತು ಹಿತ್ತಾಳೆ ಕಳವು…!!
    ಇತ್ತೀಚಿನ ಸುದ್ದಿ

    ಕುಂಬಳೆ: ತರವಾಡು ಮನೆಗೆ ನುಗ್ಗಿದ ಕಳ್ಳರು : ಹಣ, ಚಿನ್ನಾಭರಣ, ಬೆಳ್ಳಿ, ತಾಮ್ರ ಮತ್ತು ಹಿತ್ತಾಳೆ ಕಳವು…!!

    July 23, 2024
    Share

    ಕುಂಬಳೆ: ನಗರದ ತರವಾಡು ಮನೆಗೆ ನುಗ್ಗಿದ ಕಳ್ಳರು ಬೇರೆ ಬೇರೆ ದೈವಗಳ ಆಯುಧ, ಚಿನ್ನಾಭರಣ, ಬೆಳ್ಳಿ, ತಾಮ್ರ, ಹಿತ್ತಾಳೆಯ ವಿವಿಧ ವಸ್ತುಗಳು, ಹಣವನ್ನು ಎಗರಿಸಿದ ಘಟನೆ ಸಂಭವಿಸಿದೆ.

    ಕುಂಬಳೆ ಪೇಟೆಯಲ್ಲಿರುವ ಶಬರ ಶಂಕರ ಸೇವಾ ಸಮಿತಿಯ ಕುನ್ನಿಲ್‌ಪಾರ ತರವಾಡು ಕ್ಷೇತ್ರ ಹಾಗೂ ತರವಾಡು ಮನೆಯಿಂದ ಚಿನ್ನಾಭರಣ, ಭಂಡಾರ ಸಹಿತ ವಿವಿಧ ಸೊತ್ತುಗಳು ಕಳವಿಗೀಡಾಗಿದೆ.

    ಚಿನ್ನದಿಂದ ತಯಾರಿಸಲಾದ ಒಂದು ಹೂವು, ಹಾಗೂ ಕತ್ತಿ ಕಳವಿಗೀಡಾಗಿದೆ. ತರವಾಡು ಕ್ಷೇತ್ರದಿಂದ ಶ್ರೀ ವಯನಾಟು ಕುಲವನ್ ದೈವದ ಬೆಳ್ಳಿಯಿಂದ ತಯಾರಿಸಲಾದ ಆಯುಧ, ವಿಷ್ಣುಮೂರ್ತಿ ದೈವದ ಎರಡು ಆಯುಧಗಳು, ತೊಂಡಚ್ಚಮ್ಮಾರ್ ದೈವದ ಆಯುಧ, ಹಿತ್ತಾಳೆಯ ಮೂರು ಪಾತ್ರೆಗಳು, 25 ಕಾಲುದೀಪಗಳು, ಚೆಂಬು, ಕಾಣಿಕೆ ಹುಂಡಿ, ವೆಂಕಟ್ರಮಣ ದೇವರ ಮುಡಿಪು ಕಳವಿಗೀಡಾಗಿದೆ. 

    ಕಾಣಿಕೆ ಹುಂಡಿಯಲ್ಲಿ ಸುಮಾರು 1 ಸಾವಿರ ರೂಪಾಯಿ, ಮುಡಿಪಿನಲ್ಲಿ ಸುಮಾರು 15 ಸಾವಿರ ರೂಪಾಯಿಗಳಿತ್ತೆಂದು ಸಂಬಂಧಪಟ್ಟವರು  ತಿಳಿಸಿದ್ದಾರೆ. ಜು. 21 ರ ಸಂಜೆ ಕ್ಷೇತ್ರದಲ್ಲಿ ದೀಪ ಹಚ್ಚಲು ಹೋದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ತರವಾಡು ಕ್ಷೇತ್ರ ಹಾಗೂ ತರವಾಡು ಮನೆಯ ಬೀಗ ಮುರಿದಿರುವುದು ಕಂಡುಬಂದಿದೆ.

    ಈ ಬಗ್ಗೆ ಸೇವಾ ಸಮಿತಿ ಕಾರ್ಯಕಾರಿ ಸದಸ್ಯ ಮನೋಹರ್ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಕಳ್ಳರ ಪತ್ತೆಗಾಗಿ ತನಿಖೆ ತೀವ್ರಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    Post Views: 178

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.