ಕಾಸರಗೋಡು: ರಾಷ್ಟ್ರ ಧ್ವಜವನ್ನು ಸಂಜೆ ಕೆಳಗಿಳಿಸುವಾಗ ವಿದ್ಯುತ್ ಶಾಕ್‌ನಿಂದ ಇಗರ್ಜಿಯ ಫಾದರ್ ಒಬ್ಬರು ಸಾವಿಗೀಡಾಗಿದ್ದಾರೆ. ಪಕ್ಕದಲ್ಲೇ ಇದ್ದ ಮತ್ತೋರ್ವರಿಗೆ ಗಾಯ ವಾಗಿದ್ದು, ಆಸ್ಪತ್ರೆಗೆ ದಾಖಲಿಸಸಲಾಗಿದೆ ಎಂದು ತಿಳಿದು ಬಂದಿದೆ.
ಮೃತಪಟ್ಟವರು ಮುಳ್ಳೇರಿಯ ಇನ್‌ಫೆಂಟ್ ಸೈಂಟ್ ಜೀಸಸ್ ಇಗರ್ಜಿಯ ಫಾದರ್ ಶಿನ್ಸ್ (30) ಎಂದು ತಿಳಿಯಲಾಗಿದೆ.
ಆ. 15ರಂದು ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಆರೋಹಣ ಮಾಡಿದ್ದ ರಾಷ್ಟ್ರ ಧ್ವಜವನ್ನು ಸಂಜೆ ಆರು ಗಂಟೆಗೆ ಕೆಳಗಿಳಿಸುವಾಗ ಘಟನೆ ನಡೆದಿದೆ.
ಗುರುವಾರ ಸಂಜೆ 6 ಗಂಟೆಗೆ ಮುಳ್ಳೇರಿಯದ ಇಗರ್ಜಿಗೆ ತಲುಪಿ ರಾಷ್ಟ್ರ ಧ್ವಜವನ್ನು ಕೆಳಗಿಳಿಸುತ್ತಿದ್ದಾಗ ರಾಷ್ಟ್ರ ಧ್ವಜಾರೋಹಣಗೈದ ಕಬ್ಬಿಣದ ದಂಡಕ್ಕೆ ಸಿಲುಕಿಕೊಂಡ ಧ್ವಜವನ್ನು ತೆಗೆಯಲು ಕಂಬವನ್ನು ಮೇಲಕ್ಕೆತ್ತಿದ್ದಾಗ ಹೈಟೆನ್ಶನ್ ತಂತಿಗೆ ಸ್ಪರ್ಶಿಸಿ ವಿದ್ಯುತ್ ಶಾಕ್ ಆಯಿತು. ಮತ್ತೋರ್ವ ಫಾದರ್ ಸೈಬಿನ್ ಜೋಸೆಫ್ ಅವರಿಗೂ ವಿದ್ಯುತ್ ಶಾಕ್ ತಗಲಿದೆ. ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿದರೂ, ಫಾದರ್ ಶಿನ್ಸ್ ಸಾವಿಗೀಡಾದರು ಎಂದು ಎನ್ನಲಾಗಿದೆ.