Facebook Twitter Instagram
    Monday, June 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಉಪ್ಪಿನಂಗಡಿ: ಕೂಟೇಲು ಸೇತುವೆ ಬಳಿ ಕಾರುಗಳು ಮುಖಾಮುಖಿ ಢಿಕ್ಕಿ-ಪ್ರಯಾಣಿಕರಿಗೆ ಗಾಯ
    ಇತ್ತೀಚಿನ ಸುದ್ದಿ

    ಉಪ್ಪಿನಂಗಡಿ: ಕೂಟೇಲು ಸೇತುವೆ ಬಳಿ ಕಾರುಗಳು ಮುಖಾಮುಖಿ ಢಿಕ್ಕಿ-ಪ್ರಯಾಣಿಕರಿಗೆ ಗಾಯ

    July 19, 2022
    Share

    ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಕೂಟೇಲು ಸೇತುವೆ ಬಳಿ ಕಾರುಗಳೆರಡು ಮುಖಾಮುಖಿ ಢಿಕ್ಕಿಯಾಗಿ ಒಂದು ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

    ಕೆಮ್ಮಾರದ ಮುಹಮ್ಮದ್‌ ನವಾಝ್ ಹಾಗೂ ಅನ್ಸಾರ್‌ ಗಾಯಗೊಂಡವರಾಗಿದ್ದಾರೆ. ಸ್ವಿಫ್ಟ್ ಡಿಸೈರ್‌ ಕಾರಿನಲ್ಲಿದ್ದ ಸಾಮೆತ್ತಡ್ಕದ ನಿವಾಸಿ ಅಬ್ದುಲ್‌ ಮಜೀದ್‌ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

    ಉಪ್ಪಿನಂಗಡಿ ಕಡೆಯಿಂದ ಹಳೆಗೇಟು ಕಡೆ ಹೋಗುತ್ತಿದ್ದ ಕಾರು ಕೂಟೇಲು ಸೇತುವೆಯ ಬಳಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದು ಹಳೆಗೇಟಿನಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಡಿಸೈರ್‌ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ.

    ಢಿಕ್ಕಿಯ ರಭಸಕ್ಕೆ ಸ್ವಿಫ್ಟ್ ಡಿಸೈರ್‌ ಕಾರು ಹಳೆಗೇಟು ಕಡೆ ಮುಖ ಮಾಡಿ ರಸ್ತೆಯಂಚಿನ ತಗ್ಗು ಪ್ರದೇಶಕ್ಕೆ ಮಗುಚಿ ಬಿದ್ದರೆ, ಮಾರುತಿ 800 ಕಾರು ರಸ್ತೆಯ ಇನ್ನೊಂದು ಬದಿ ಉಪ್ಪಿನಂಗಡಿ ಕಡೆಗೆ ಮುಖ ಮಾಡಿ ನಿಂತಿದೆ. ಮಾರುತಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Post Views: 288

    Related Posts

    ಹಠಾತ್ ಹವಾಮಾನ ವೈಪರೀತ್ಯದ ಹೊಡೆತ: ದೆಹಲಿ ಏರ್‌ಪೋರ್ಟ್‌ನಲ್ಲಿ 3 ವಿಮಾನಗಳು ಜಖಂ

    June 8, 2026

    ಕನ್ನಡಿಗರಿಗೆ ಅವಮಾನ, ಭಕ್ತರ ಮೇಲೆ ರೌಡಿಸಂ-ಕೊಟ್ಟಿಯೂರು ಮಹೋತ್ಸವದಲ್ಲಿ ವಿವಾದ

    June 8, 2026

    ಚಪ್ಪರದಡಿ ನಡೆಯುತ್ತಿದ್ದ ಜೂಜಾಟಕ್ಕೆ ಪೊಲೀಸರ ಮುತ್ತಿಗೆ; ಕಿಂಗ್‌ಪಿನ್‌ಗಳಿಗಾಗಿ ಹುಡುಕಾಟ

    June 8, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.