ಕಾರ್ಕಳ : ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆಯ ಮನೆಯೊಂದರ ಬೀಗ ಮುರಿದು ಚಿನ್ನ ಕಳ್ಳತನ ಮಾಡಿದ ಆರೋಪಿಯನ್ನು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಳ ಗ್ರಾಮದ ನಿವಾಸಿ ತಂಗಚ್ಚನ್ ಮಗ ಸಂತೋಷ್ ಟಿ. ಬಂಧಿತ ಆರೋಪಿಯಾಗಿದ್ದು ಈತ ಆ. 30 ರಂದು ಗುರ್ಗಾಲ್ ಗುಡ್ಡೆಯ ಮನೆಯೊಂದರ ಬಾಗಿಲು ಮುರಿದು ಬೆಡ್ ರೂಂನ ಲಾಕರ್ ನಲ್ಲಿದ್ದ 33 ಪವನ್ ಮೌಲ್ಯದ ವಿವಿಧ ರೀತಿಯ ಚಿನ್ನಾಭರಣ ಕಳ್ಳತನ ಮಾಡಿದ್ದ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು 33 ಪವನ್ ಚಿನ್ನಾಭರಣ ಸಹಿತ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾ ಪಿಎಸ್ಐ ದಿಲೀಪ್ ಜಿ. ಆರ್., ತನಿಖಾ ವಿಭಾಗದ ಪಿ.ಎಸ್.ಐ. ಸುಂದರ ಹಾಗೂ ಸಿಬ್ಬಂದಿ ಮಹಾಂತೇಶ್, ಪ್ರಶಾಂತ್ ಕೆ., ವಿಶ್ವನಾಥ, ಶಶಿಕುಮಾರ್, ನಾಗರಾಜ, ಗೋವಿಂದ ಆಚಾರಿ ರಾಘವೇಂದ್ರ, ಅಶೋಕ ಭಾಗಿಯಾಗಿದ್ದರು.