Facebook Twitter Instagram
    Sunday, September 6
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»Uncategorized»ಮುಲ್ಕಿ: ಏಳಿಂಜೆ ಶಾಂಭವಿ ನದಿಯಿಂದ ಅಕ್ರಮ ಮರಳು ಸಾಗಾಟ – ಟಿಪ್ಪರ್ ಪಲ್ಟಿ, ಸಿಕ್ಕಿ ಬಿದ್ದ ಆರೋಪಿಗಳು
    Uncategorized

    ಮುಲ್ಕಿ: ಏಳಿಂಜೆ ಶಾಂಭವಿ ನದಿಯಿಂದ ಅಕ್ರಮ ಮರಳು ಸಾಗಾಟ – ಟಿಪ್ಪರ್ ಪಲ್ಟಿ, ಸಿಕ್ಕಿ ಬಿದ್ದ ಆರೋಪಿಗಳು

    September 26, 2024
    Share

    ಮುಲ್ಕಿ :ಪೊಲೀಸ್‌ ಠಾಣಾ ವ್ಯಾಪ್ತಿಯ ಎಳಿಂಜೆ ಗ್ರಾಮದ ಪಟ್ಟೆ ಕ್ರಾಸ್ ಬಳಿ ಶಾಂಭವಿ ನದಿಗೆ ಹೋಗುವ ರಸ್ತೆಯಲ್ಲಿ ಮರಳು ತುಂಬಿದ ಲಾರಿಯೊಂದು ಮುಗುಚಿ ಬಿದ್ದಿರುವುದಾಗಿ ಮಾಹಿತಿ ತಿಳಿದು ಮುಲ್ಕಿ ಪೊಲೀಸರು ಪಟ್ಟೆ ಕ್ರಾಸ್ ಎಂಬಲ್ಲಿಗೆ ತೆರಳಿ ಪರಿಶೀಲಿಸಿದಾಗ ಅಕ್ರಮ ಮರಳು ಸಾಗಾಟ ಬಯಲಿಗೆ ಬಂದಿದ್ದು ಮರಳನ್ನು ಸಹಿತ ಕ್ರೇನ್ ಹಾಗೂ ಜೆಸಿಬಿಯನ್ನು ವಶಪಡಿಸಿಕೊಂಡು ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಕಿನ್ನಿಗೋಳಿ ಸಮೀಪದ ಎಳಿಂಜೆ ಪಟ್ಟೆ ಕ್ರಾಸ್ ನಂದಿನಿನದಿ ಬದಿಗೆ ಹಾದು ಹೋಗುವ ಕಚ್ಚಾ ಮಣ್ಣು ರಸ್ತೆಯ ಇಳಿಜಾರು ಪ್ರದೇಶದಲ್ಲಿ ಸುಮಾರು 1 ಟಿಪ್ಪರ್ ಲಾರಿ ಲೋಡಿನಷ್ಟು ಸಾಮಾನ್ಯ ಮರಳು ಬಿದ್ದುಕೊಂಡಿದ್ದು ಸ್ಥಳದಲ್ಲಿದ್ದ ಕ್ರೇನ್ ನ ಅಪರೇಟರ್ ಜಬ್ಬರ್ ಬಳಿ ವಿಚಾರಿಸಿದಾಗ ಮರಳು ತುಂಬಿದ ಟಿಪ್ಪರ್ ಲಾರಿಯು ರಸ್ತೆ ಬದಿಗೆ ಬಿದ್ದಿರುವ ಬಗ್ಗೆ ಟಿಪ್ಪರ್ ಲಾರಿಯ ಮಾಲಕ ಸುಜಿತ್ ಎಂಬವರು ಕರೆ ಮಾಡಿದಂತೆ ತನ್ನ ಕ್ರೇನ್ ನಲ್ಲಿ ಟಿಪ್ಪರ್ ಲಾರಿಯನ್ನು ಮೇಲಕ್ಕೆತ್ತಲು ಕ್ರೇನ್ ಹಾಗೂ ಜೆಸಿಬಿ ಬಂದಿರುವುದಾಗಿ ತಿಳಿಸಿದ್ದಾನೆ.ಟಿಪ್ಪರ್ ಲಾರಿಯ ಪಕ್ಕದಲ್ಲಿ ನಿಂತುಕೊಂಡಿದ್ದ ಆರೋಪಿಗಳಾದ ಸುಜಿತ್ ಮತ್ತು ಅಜಿತ್ ಎಂಬವರನ್ನು ವಿಚಾರಿಸಿದಾಗ ತಾವು ಪಕ್ಕದ ನದಿಯಿಂದ ಸಾಮಾನ್ಯ ಮರಳನ್ನು ತೆಗೆದು ಅದನ್ನು ಮಾರಾಟದ ಬಗ್ಗೆ KA-21-A-0647 ನಂಬ್ರದ ಟಿಪ್ಪರ್ ನಲ್ಲಿ ಸಾಗಾಟ ಮಾಡುತ್ತಿದ್ದಾಗ ರಾತ್ರಿ ಸುಮಾರು 9ಗಂಟೆಗೆ ಮಳೆಯ ಕಾರಣ ಟಯರ್ ಕೆಸರಿನಲ್ಲಿ ಹೂತು ಟಿಪ್ಪರ್ ಲಾರಿಯು ಪಲ್ಟಿಯಾಗಿದ್ದಾಗಿ, ಲಾರಿಯಲ್ಲಿ ತುಂಬಿಸಿದ್ದ ಮರಳು ಚೆಲ್ಲಿರುವುದಾಗಿ ತಿಳಿಸಿದ್ದಾರೆ. ಎಳಿಂಜೆ ಗ್ರಾಮದ ಪಟ್ಟೆ ಕ್ರಾಸ್ ಎಂಬಲ್ಲಿ ಶಾಂಭವಿ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೇ ನದಿಯಿಂದ ಸಾಮಾನ್ಯ ಮರಳನ್ನು ಕಳವು ಮಾಡಿ ಅದನ್ನು ಟಿಪ್ಪರ್ (KA-21-A-0647) ಲಾರಿಯಲ್ಲಿ ಮಾರಾಟದ ಬಗ್ಗೆ ಸಾಗಾಟ ಮಾಡುತ್ತಿದ್ದ ಬಗ್ಗೆ ಆರೋಪಿಗಳ ವಿರುದ್ಧ ಮುಲ್ಕಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ನದಿ ತೀರದ ಪ್ರದೇಶಗಳಾದ ಬಳ್ಕುಂಜೆ, ಎಳಿಂಜೆ, ಪಂಜ ಮತ್ತಿತರ ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು ಗಣಿ ಭೂ ವಿಜ್ಞಾನ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.

    Post Views: 260

    Related Posts

    ನ್ಯಾಯಾಲಯಕ್ಕೆ ಹಾಜರಾಗದೆ ಆರು ವರ್ಷಗಳಿಂದ ಪರಾರಿಯಾಗಿದ್ದ ಆರೋಪಿ ವಶಕ್ಕೆ

    May 16, 2026

    ಕಾಪು: ಸ್ಕೂಟಿಗೆ ಬಸ್ ಡಿಕ್ಕಿ- ಬಾಲಕಿ ಸಾವು

    April 22, 2026

    ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ- ಮೆಸ್ಕಾಂ ಸಿಬ್ಬಂದಿ ಮೃತ್ಯು

    March 25, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

    September 6, 2026

    ಪುತ್ತೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ವಿರುದ್ಧ ಪ್ರಕರಣ

    September 6, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.